ದಾವಣಗೆರೆ ಅರ್ಬನ್ ಬ್ಯಾಂಕಿಗೆ 2ನೇ ಬಾರಿಗೆ ಅತ್ಯುನ್ನತ ರಾಷ್ಟ್ರೀಯ ಸಹಕಾರಿ ಬ್ಯಾಂಕ್ ಪ್ರಶಸ್ತಿ

ದಾವಣಗೆರೆ ಅರ್ಬನ್ ಬ್ಯಾಂಕಿಗೆ 2ನೇ ಬಾರಿಗೆ ಅತ್ಯುನ್ನತ ರಾಷ್ಟ್ರೀಯ ಸಹಕಾರಿ ಬ್ಯಾಂಕ್ ಪ್ರಶಸ್ತಿ

ದಾವಣಗೆರೆ, ಜ. 29-  ಭಾರತದ ಸಹಕಾರ ಬ್ಯಾಂಕ್‌ಗಳಲ್ಲೇ ಅತ್ಯುನ್ನತ ಸಹಕಾರಿ ಬ್ಯಾಂಕ್‌ಗಳಲ್ಲೊಂದು ಎಂಬ ರಾಷ್ಟ್ರೀಯ ಪ್ರಶಸ್ತಿಗೆ, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಸತತ 2ನೇ ಬಾರಿಗೆ ಭಾಜನವಾಗಿದೆ.

ಏವೀಸ್ ಪಬ್ಲಿಕೇಷನ್ (ಕೊಲ್ಲಾಪುರ) ಸಂಸ್ಥೆ ಯು ಪ್ರತಿ ವರ್ಷ ಭಾರತ ದೇಶದಲ್ಲಿನ ಸಹಕಾರ ಬ್ಯಾಂಕುಗಳನ್ನು ಮೂರು ವರ್ಗಗಳಲ್ಲಿ ವಿಂಗಡಿಸಿ, ಪ್ರತಿ ವರ್ಗದಲ್ಲಿ ಅತ್ಯುನ್ನತ ಸಹಕಾರಿ ಬ್ಯಾಂಕ್ ಎಂದು ಗುರುತಿಸಿ ನೀಡುವ ಪ್ರಶಸ್ತಿಗೆ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಆಯ್ಕೆಯಾಗಿದೆ.

ಏವೀಸ್ ಪಬ್ಲಿಕೇಷನ್ ಸಂಸ್ಥೆಯು ವಿಂಗಡಿಸಿ ರುವ ಮೂರು ವರ್ಗಗಳ ಪೈಕಿ 500 ರಿಂದ 550 ಕೋಟಿ ರೂ. ಠೇವಣಿ ಹೊಂದಿರುವ ವಿಭಾಗಕ್ಕೆ ದಾವಣಗೆರೆ ಅರ್ಬನ್ ಬ್ಯಾಂಕ್‌ಗೆ ಪ್ರಶಸ್ತಿ ನೀಡಿದೆ. 

ಈ ಬ್ಯಾಂಕ್ 2023-24ನೇ ಸಾಲಿನಲ್ಲಿ 546 ಕೋಟಿ ರೂ. ಠೇವಣಿ ಹೊಂದಿತ್ತು.  ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯದ ಪೂನಾ ಸಮೀಪದ ಲೋನಾವಾಲದಲ್ಲಿ ಏವೀಸ್ ಪಬ್ಲಿಕೇಷನ್ ಇಂದು ಏರ್ಪಡಿಸಿದ್ದ ರಾಷ್ಟ್ರೀಯ ಸಹಕಾರ ಸಮ್ಮೇಳನ – 2024 ರಲ್ಲಿ ಅತ್ಯುನ್ನತ ಸಾಧನೆಗೈದ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ ಬ್ಯಾಂಕೋ ಬ್ಲೂ ರಿಬ್ಬನ್  2024 ಪ್ರಶಸ್ತಿ ನೀಡಿ ಗೌರವಿಸಿದೆ.

ದಾವಣಗೆರೆ  ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಟಿ.ಎಸ್. ಜಯರುದ್ರೇಶ್, ನಿರ್ದೇಶಕರುಗಳಾದ ಅಜ್ಜಂಪುರ ಶೆಟ್ರು ವಿಜಯಕುಮಾರ್, ಕಂಚಿಕೆರೆ ಮಹೇಶ್, ಮಲ್ಲಿಕಾರ್ಜುನ ಕಣವಿ ಅವರುಗಳು ಈ ಸಮಾರಂಭದಲ್ಲಿ ಪಾಲ್ಗೊಂಡು, ಬ್ಯಾಂಕಿನ ಪರವಾಗಿ ಅತಿಥಿ ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಿದರು.

ಸಂತಸ :  ಈ ಬ್ಯಾಂಕ್ 2022-23ನೇ ಸಾಲಿನಲ್ಲೂ ಇದೇ ರಾಷ್ಟ್ರೀಯ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ನಂತರದ ವರ್ಷ 2023-24ನೇ ಸಾಲಿನಲ್ಲೂ ಮತ್ತೆ ಈ ಪ್ರಶಸ್ತಿ ತಮ್ಮ ಬ್ಯಾಂಕ್ ಪಡೆದಿರುವುದು ಸಂತಸ ತಂದಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಬಿ.ಸಿ. ಉಮಾಪತಿ ಸಂತಸ ವ್ಯಕ್ತಪಡಿಸಿದ್ದಾರೆ.

ಕೃತಜ್ಞತೆ :  ಬ್ಯಾಂಕಿನ ಅತ್ಯುನ್ನತ ಸಾಧನೆಗೆ ಸಹಕರಿಸುತ್ತಿರುವ ಬ್ಯಾಂಕಿನ ಸದಸ್ಯರಿಗೂ, ಗ್ರಾಹಕರಿಗೂ, ಠೇವಣಿದಾರರಿಗೂ, ಕಾರ್ಯನಿರ್ವಾಹಕ ಮಂಡಳಿ ಸದಸ್ಯರಿಗೂ, ವ್ಯವಸ್ಥಾಪನಾ ಮಂಡಳಿ ಸದಸ್ಯರಿಗೂ, ಸಿಬ್ಬಂದಿ ವರ್ಗದವರಿಗೂ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷರೂ, ಹಿರಿಯ ನಿರ್ದೇಶಕರೂ, ಡಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಕೋಗುಂಡಿ ಬಕ್ಕೇಶಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.

error: Content is protected !!