ದಾವಣ ಗೆರೆ, ಜ. 23- ಅಖಿಲ ಭಾರತ ವೀರಶೈವ ಮಹಾಸಭಾದ ನೂತನ ಪದಾಧಿಕಾರಿಗಳನ್ನು ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರು ಆಯ್ಕೆ ಮಾಡಿದ್ದಾರೆ.
ಉಪಾಧ್ಯಕ್ಷರಾಗಿ ಡಾ.ಪ್ರಭಾಕರ ಕೋರೆ, ವಿ.ಸಿ. ಚರಂತಿಮಠ್, ಬಿ.ಎಸ್. ಸಚ್ಚಿದಾನಂದಮೂರ್ತಿ, ವಿನಯ್ ಕುಲಕರ್ಣಿ, ಎ.ಎಸ್. ವೀರಣ್ಣ, ಅಣಬೇರು ರಾಜಣ್ಣ, ಎಸ್.ಎಸ್. ಗಣೇಶ್, ಶರಣಬಸಪ್ಪ ದರ್ಶನಾಪೂರ್, ಬಿ.ಕೆ. ಚಂದ್ರಕಲಾ, ಗುರಮ್ಮ ಸಿದ್ದರೆಡ್ಡಿ, ಸಿದ್ರಾಮಪ್ಪ ಸಿ. ಉಪ್ಪಿನ್, ವಿಶ್ವನಾಥ್ ಬಾಬುರಾವ್ ಚಕೋಟೆ, ಪ್ರಧಾನ ಕಾರ್ಯದರ್ಶಿಯಾಗಿ ಈಶ್ವರ ಖಂಡ್ರೆ, ಕಾರ್ಯದರ್ಶಿಯಾಗಿ ಹೆಚ್.ಎಂ. ರೇಣುಕಾ ಪ್ರಸನ್ನ ಅವರನ್ನು ಆಯ್ಕೆ ಮಾಡಲಾಗಿದೆ.