ಶಿಕ್ಷಣ, ಸಾಹಿತ್ಯ ಮೇಳಕ್ಕೆ ಸರ್ವಾಧ್ಯಕ್ಷರಾಗಿ ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ ಆಯ್ಕೆ

ಶಿಕ್ಷಣ, ಸಾಹಿತ್ಯ ಮೇಳಕ್ಕೆ ಸರ್ವಾಧ್ಯಕ್ಷರಾಗಿ ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ ಆಯ್ಕೆ

ದಾವಣಗೆರೆ, ಜ. 21 – ಸುವರ್ಣ ದೇಶ ಪಬ್ಲಿಕೇಶನ್ ಹಾಗೂ ಎಲ್ ಆರ್ ಇವೆಂಟ್ಸ್ ಮತ್ತು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಆಯೋಜಿಸಿರುವ `ಶಿಕ್ಷಣ ಸಾಹಿತ್ಯ ಮೇಳ’ ಕ್ಕೆ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಅಮೃತ ಪುರುಷ ಬಿ. ವಾಮದೇವಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶಿಕ್ಷಣ- ಸಾಹಿತ್ಯ ಮೇಳದ ಸಂಘಟಕರು ತಿಳಿಸಿದ್ದಾರೆ.

2025 ರ ಫೆ. 7, 8 ಮತ್ತು  9 ರಂದು ದಾವಣಗೆರೆ ನಗರದ ಸರ್ಕಾರಿ ಪ್ರೌಢಶಾಲಾ ಮೈದಾನ ದಲ್ಲಿ 3 ದಿನಗಳ ಕಾಲ ನಡೆಯ ಲಿರುವ ಈ ಮೇಳ ಕ್ಕೆ ನಿರಂತರ ವಾಗಿ ಕನ್ನಡ ನಾಡು, ನುಡಿ, ಸಾಹಿತ್ಯ ಸೇವೆ ಯಲ್ಲಿ ತೊಡಗಿಸಿಕೊಂಡಿರುವ ಹಾಗೂ ಇತ್ತೀಚೆಗೆ 75 ವಸಂತಗಳನ್ನು ಪೂರೈಸಿ ಅಮೃತಪುರುಷ ಎನಿಸಿಕೊಂಡಿರುವ ಬಿ. ವಾಮದೇವಪ್ಪ ಅವರ ಆಯ್ಕೆ ಅತ್ಯಂತ ಸೂಕ್ತವಾಗಿದೆ ಎಂದು ತಿಳಿಸಲಾಗಿದೆ. 

ಜಿಲ್ಲೆಯ ಎಲ್ಲಾ  ಸಾಹಿತ್ತಾಸಕ್ತರು  ಪರಿಷತ್ತಿನ ಪ್ರತಿನಿಧಿಗಳು ಹಾಗೂ ಮೇಳ ನಡೆಸುತ್ತಿರುವ ಎಲ್ಲಾ ಪದಾಧಿಕಾರಿಗಳ ಅಭಿಲಾಷೆ, ಅಪೇಕ್ಷಿಯ ಮೇರೆಗೆ ಸಮ್ಮೇಳನ ಅಧ್ಯಕ್ಷರನ್ನಾಗಿ ಬಿ. ವಾಮದೇವಪ್ಪ ಅವರನ್ನು ಆಯ್ಕೆ ಮಾಡಿರುವುದು ಎಲ್ಲರಿಗೂ ಸಂತಸ ತಂದಿದೆ. 

ಮೇಳದ ಉಸ್ತುವಾರಿ ವಹಿಸಿಕೊಂಡಿರುವ ಆನಂದ ಗೌಡ ಅವರು ಸಮ್ಮೇಳನ ಅಧ್ಯಕ್ಷರನ್ನಾಗಿ ಕವಿಗಳನ್ನು ಆಯ್ಕೆ ಮಾಡುವುದು ರೂಢಿ. ಆದರೆ ಕನ್ನಡ ಸಾಹಿತ್ಯಕ್ಕಾಗಿ ನಿಜವಾಗಿಯೂ ದುಡಿಯುವವರು, ಕನ್ನಡ ನಾಡು ನುಡಿಗಾಗಿ ಸಾಹಿತ್ಯ ಪರಿಷತ್ತಿನಲ್ಲಿ ಸೇವೆ ಸಲ್ಲಿಸುವವರು ಅಂತಹವಾರ ಸೇವೆಗೂ ತಕ್ಕ ಗೌರವ ದೊರೆಯುವಂತಾಗಬೇಕು ಎಂಬ ಅಭಿಲಾಷೆ, ಅಭಿಪ್ರಾಯದಿಂದಲೇ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನೇ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

error: Content is protected !!