ಹರಿಹರ ತಾಲ್ಲೂಕು ಕೊಂಡಜ್ಜಿ ಕೆರೆ ಸಮೀಪ ಕಂಡು ಬಂದ ಚೋಟುದ್ದ ದೇಹ, ಮಾರುದ್ದ ಬಾಲದ ಹಕ್ಕಿ ಇದು. ಇದನ್ನು ಬಾಲದಂಡೆ ಹಕ್ಕಿ ಅಥವಾ ಇಂಡಿಯನ್ ಪ್ಯಾರಡೈಸ್ ಫ್ಲೈಕ್ಯಾಚರ್ ಎನ್ನಲಾಗುತ್ತದೆ.
ಆಕರ್ಷಕ ಬಣ್ಣ ಮತ್ತು ತನ್ನ ದೇಹಕ್ಕಿಂತ ಎರಡು ಪಟ್ಟು ಉದ್ದದ ಓಲಾಡುವ ಬಾಲದಿಂದಾಗಿ ಇದು ಪಕ್ಷಿ ವೀಕ್ಷಕರನ್ನು ಆಕರ್ಷಿಸುತ್ತದೆ. ಇವು ಪ್ರಧಾನವಾಗಿ ಶ್ರೀಲಂಕಾ ಮತ್ತು ಮ್ಯಾನ್ಮಾರ್ ಸೇರಿದಂತೆ, ಭಾರತೀಯ ಉಪಖಂಡದಾದ್ಯಂತ ಕಂಡುಬರುತ್ತವೆ. ದಟ್ಟವಾದ ಕಾಡು, ಸಸ್ಯವರ್ಗದ ಉದ್ಯಾನವನಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ.