ಬಿಡಾಡಿ ಹಸುಗಳು ಸ್ಥಳಾಂತರ, ಹಂದಿಗಳ ಸಾಕಾಣಿಕೆಗೆ ವರಾಹ ಶಾಲೆ ನಿರ್ಮಾಣ

ಬಿಡಾಡಿ ಹಸುಗಳು ಸ್ಥಳಾಂತರ, ಹಂದಿಗಳ ಸಾಕಾಣಿಕೆಗೆ ವರಾಹ ಶಾಲೆ ನಿರ್ಮಾಣ

ಕಾಮಗಾರಿ ವೀಕ್ಷಿಸಿದ ಸವಿತಾ ಹುಲ್ಲುಮನೆ ಗಣೇಶ್

ದಾವಣಗೆರೆ, ಜ. 16 –  ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬಿಡಾಡಿ ಹಸುಗಳ ಸ್ಥಳಾಂತರ, ಹಂದಿಗಳ ಸಾಕಾಣಿಕೆಗೆ ಸುಸಜ್ಜಿತ ವರಾಹ ಶಾಲೆ ಸ್ಥಾಪನೆ ಕಾಮಗಾರಿಯನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಲುಮನೆ ಗಣೇಶ್ ಪರಿಶೀಲಿಸಿದರು. 

ಒಟ್ಟು 3 ಎಕರೆ ವಿಸ್ತೀರ್ಣದಲ್ಲಿ ಈಗಾಗಲೇ ಸುತ್ತಲೂ ಕಾಂಪೌಂಡ್ ನಿರ್ಮಾಣ ಪೂರ್ಣಗೊಂಡಿದ್ದು, ಉಳಿದ ಬಾಕಿ ಸಿವಿಲ್ ಕೆಲಸಗಳನ್ನು, ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಾಣ, ರಸ್ತೆ ಮತ್ತು ಸಾಕಾಣಿಕೆಗೆ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕ್ರಮವಹಿಸಲು ಸೂಚಿಸಲಾಯಿತು. 

ನಗರವನ್ನು `ಸ್ವಚ್ಛ ದಾವಣಗೆರೆ’ ಮಾಡುವ ನಿಟ್ಟಿನಲ್ಲಿ ಹಂದಿಗಳನ್ನು ಸ್ಥಳಾಂತರಿಸಲು ಮತ್ತು ಇದರ ಮೇಲೆ ಅವಲಂಬಿತವಾಗಿ ಜೀವನ ರೂಪಿಸಿ ಕೊಂಡಿರುವ ಮಾಲೀಕರಿಗೆ ತೊಂದರೆಯಾಗದ ರೀತಿಯಲ್ಲಿ ಸಾಕಾಣಿ ಕೆಗೆ ವಿದೇಶಿ ರೀತಿಯಲ್ಲಿ ಮತ್ತು ವೈಜ್ಞಾನಿಕವಾಗಿ ಅಗತ್ಯ ವಿರುವ ಸಕಲ ಸೌಲಭ್ಯ ಮತ್ತು ತರಬೇತಿಯನ್ನು ನೀಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಆಶಾ ಉಮೇಶ್, ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಧಾ ಇಟ್ಟಿಗುಡಿ ಮಂಜುನಾಥ್ ಹಾಜರಿದ್ದರು.

error: Content is protected !!