ದಾವಣಗೆರೆ,ಜ.15 – ಸ್ವಾಮಿ ವಿವೇಕಾನಂದ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದಿನಾಚರಣೆ ಅಂಗವಾಗಿ ಕೊಂಡಜ್ಜಿ ಅರಣ್ಯದಲ್ಲಿ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ವತಿಯಿಂದ ಚಾರಣ ವನ್ನು ಹಮ್ಮಿಕೊಳ್ಳಲಾಗಿತ್ತು.
ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ವಿವೇಕಾನಂದರು ಹಾಗೂ ನೇತಾಜಿ ಯುವಕರ ಪಾಲಿನ ದಿವ್ಯ ಶಕ್ತಿ ಆಗಿದ್ದರು, ಅಂತಹ ಶಕ್ತಿ ನಿಮ್ಮದಾಗಲಿ ಎಂದು ಆಶಿಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎನ್. ಕೆ. ಕೊಟ್ರೇಶ್ ಚಾರಣದ ಮಾಹಿತಿ ನೀಡಿದರು.
ಅಕಾಡೆಮಿ ಅಧ್ಯಕ್ಷ ಕೊಂಡಜ್ಜಿ ರಾಜಶೇಖರ್, ಸದಸ್ಯರಾದ ಚಂದ್ರಮಾವ್ಲಿ, ಕಿರಣ್, ಶ್ರೀನಿವಾಸ್, ಸಂತೋಷ್, ತೇಜಸ್ವಿನಿ, ಗಣೇಶ್, ಗುರುರಾಜ್, ಗೌಡ್ರು ಸುರೇಶ್, ಹನುಮಂತ, ಕಾರ್ತಿಕ್, ಅಣ್ಣಯ್ಯ. ಟಿ. ಶಿವಕುಮಾರ್. ಕು.ಚೇತನ್, ಕು. ಪರೀಕ್ಷಿತ್ ಮುಂತಾದವರು ಚಾರಣ ಶಿಬಿರದಲ್ಲಿ ಭಾಗವಹಿಸಿದ್ದರು.