ದೇವರಬೆಳಕೆರೆ ಪಿಕಪ್ ಡ್ಯಾಮ್ ವ್ಯಾಪ್ತಿಯಲ್ಲಿ ಮತ್ತು ತುಂಗಭದ್ರಾ ನದಿ ಪಾತ್ರದ ಗದ್ದೆಗಳಲ್ಲಿ ಬೇಸಿಗೆ ಹಂಗಾಮಿನ ಭತ್ತದ ನಾಟಿ ಮಾಡುವ ಕಾರ್ಯ ಭರದಿಂದ ಸಾಗಿದ್ದು, ಗುರುವಾರ ಜರೇಕಟ್ಟೆ ಬಳಿ ಗದ್ದೆಯಲ್ಲಿ ಮಹಿಳೆಯರು ನಾಟಿ ಹಚ್ಚುವ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿತು. ಭದ್ರಾ ಜಲಾಶಯದ ನೀರನ್ನೇ ಅವಲಂಬಿಸಿರುವ ಅಚ್ಚುಕಟ್ಟಿನ ರೈತರು ಇದೀಗ ಭತ್ತದ ಸಸಿ ಮಡಿ ಚೆಲ್ಲಿದ್ದು, ಇನ್ನೂ 15-20 ದಿನಗಳ ನಂತರ ನಾಟಿ ಆರಂಭಿಸುವ ಸಾಧ್ಯತೆ ಇದೆ.
January 17, 2025