ಮಾನ್ಯರೇ,
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ನಾಗರಸನಹಳ್ಳಿಯಿಂದ ಕೂಲಂಬಿಗೆ ಹೋಗುವ ರಸ್ತೆ ತುಂಬಾ ಹದಗೆಟ್ಟಿದ್ದು, ಪ್ರತಿದಿನ ಓಡಾಡುವ ಜನರಿಗೆ ತುಂಬಾ ತೊಂದರೆಯಾಗುತ್ತಿದೆ.
ಈ ರಸ್ತೆಯಲ್ಲಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಈ ವಿಷಯವನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಗಳು, ಶಾಸಕರ ಗಮನಕ್ಕೆ ತಂದರೂ ಸಹ ಈ ಬಗ್ಗೆ ಯಾವುದೇ ರೀತಿ ಗಮನ ಹರಿಸಿಲ್ಲ. ಇದನ್ನು ಆದಷ್ಟು ಬೇಗ ಸಿರಪಡಿಸದೇ ಇದ್ದರೆ ಅದೆಷ್ಟೋ ಜನರಿಗೆ ತೊಂದರೆ ಆಗಲಿದೆ. ಈ ವಿಚಾರವನ್ನು ಶಾಸಕರಾಗಲೀ, ಸಚಿವರಾಗಲೀ, ಸಂಸದರಾಗಲೀ ಗಮನ ಹರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ.
– ಜಯಪ್ಪ, ನಿವೃತ್ತ ಶಿಕ್ಷಕ