ಗುತ್ತೂರು ರಾಮಕೃಷ್ಣ ಶಾಲೆಯಲ್ಲಿ ಕಲೋತ್ಸವ

ಗುತ್ತೂರು ರಾಮಕೃಷ್ಣ ಶಾಲೆಯಲ್ಲಿ ಕಲೋತ್ಸವ

ಹರಿಹರ, ಡಿ. 27 – ಗುತ್ತೂರು ಕಾಲೋನಿಯಲ್ಲಿರುವ ಶ್ರೀ ರಾಮಕೃಷ್ಣ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಮಕ್ಕಳ ಕಲೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವು ನಡೆಯಿತು.

ವಿಜಯ ಕಿರಣ್ ಟ್ರಾನ್ಸ್‌ ಪೋರ್ಟ್‌ನ ಮಾಲೀಕರು ಹಾಗೂ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ವಿಜಯಕು ಮಾರ್, ಕಿರಣ್ ಕುಮಾರ್ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ರಾಜನಹಳ್ಳಿಯ ಸಿಆರ್‌ಪಿಯ ವರಾದ ಶ್ರೀಧರ ಚೆನ್ನಕೇಶವ ಕಟ್ಟಿ, ನಿರ್ದೇಶಕಿ ಶ್ರೀಮತಿ ಸಹನಾ ವಿಜಯಕುಮಾರ್, ಸ್ನೇಹಕಿರಣ್ ಕುಮಾರ್, ಶಶಿಧರ್, ವಿಜಯರಾಘವೇಂದ್ರರವರು ಸಸಿಗೆ ನೀರನ್ನು ಹಾಕುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತಿಯೊಂದು ಮಕ್ಕಳಿಗೂ ಕೂಡ ತಮ್ಮದೇ ಆದ ವಿಶೇಷ ಪ್ರತಿಭೆ, ಧೈರ್ಯ ಇದ್ದೇ ಇರುತ್ತದೆ. ಅಂತಹ ಪ್ರತಿಭೆಯನ್ನು ಹೊರ ತರುವಂತಹ ಕೆಲಸ ಈ ಶಾಲೆ ಮಾಡುತ್ತಿದೆ ಎಂದು ರಾಜನಹಳ್ಳಿಯ ಸಿಆ‌ರ್‌ಪಿ ಶ್ರೀಧರ ಚೆನ್ನಕೇಶವ ಕಟ್ಟಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಉದಯ್‌ ಕುಮಾರ್, ಸಹ ಶಿಕ್ಷಕಿಯರಾದ ಶಾರದಾ ಕನ್ಯಾಳ್, ಶಶಿಕಲಾ ಜಿ.ವಿ, ಸೌಮ್ಯ, ಹೇಮಾವತಿ .ಎಲ್. ರಮಾ, ಶಿಲ್ಪ, ಕೃಷ್ಣಪ್ಪ, ರಶ್ಮಿ, ಶ್ವೇತಾ, ಕಾವ್ಯ, ಶಶಿಕಲಾ .ಆ‌ರ್. ಅನುಷಾ, ಸಿಬ್ಬಂದಿಯವರಾದ ಆಕಾಶ್, ಅನುರಾಜ್, ಮಹೇಶ್, ಶೋಭಾ, ವೀಣಾ, ಕಿರಣ್, ವೀಣಾಶ್ರೀ, ಹಾಗೂ ಇತರರು ಭಾಗವಹಿಸಿದ್ದರು.

error: Content is protected !!