ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಿರಂತನದ ನೃತ್ಯ ಪ್ರಸ್ತುತಿಗಳ ಪ್ರದರ್ಶನ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಚಿರಂತನದ ನೃತ್ಯ ಪ್ರಸ್ತುತಿಗಳ ಪ್ರದರ್ಶನ

ಮಂಡ್ಯ, ಡಿ. 26 – ಜಿಲ್ಲೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಾವಣಗೆರೆಯ ಚಿರಂತನ ಸಂಸ್ಥೆಯ ವಿದ್ಯಾರ್ಥಿಗಳು ವಿಶೇಷ ನೃತ್ಯ ಪ್ರಸ್ತುತಿಗಳನ್ನು ಪ್ರದರ್ಶಿಸಿದರು. 

ಮೊದಲಿಗೆ `ಭಾರಿಸು ಕನ್ನಡ ಡಿಂಡಿಮವ’ ಗೀತೆಗೆ ಭರತನಾಟ್ಯ ಹಾಗೂ ಫ್ಯೂಷನ್‌ನಲ್ಲಿ ನೃತ್ಯ ಪ್ರಸ್ತುತಿ ಆರಂಭಿಸಿ ನಂತರ ಡಿ.ವಿ.ಜಿ. ಅವರ ಅಂತಃಪುರ ಗೀತೆಗಳ `ನಟನವಾಡಿದಳ್’ ನೃತ್ಯಕ್ಕೆ ರಾಣಿ ಶಾಂತಲೆ ಬೇಲೂರಿನ ಶಿಲಾಬಾಲಿಕೆಯರನ್ನು ತನ್ನ ಕನಸಿನಲ್ಲಿ ಕಾಣುವ ಪ್ರಸಂಗವನ್ನು ವಿಶೇಷವಾಗಿ ಅಭಿನಯಿಸಿ ಪ್ರಸ್ತುತ ಪಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 

`ಶಿವ ಸ್ತುತಿ’ ಯಲ್ಲಿ ಶಿವನ ವರ್ಣನೆ ಜೊತೆ  ಭರತನಾಟ್ಯ ಜತಿಗಳ ಪ್ರಯೋಗ ಮಾಡಿ, ಕಡೆಯಲ್ಲಿ ಸೋಲಿಗರ ಜಾನಪದ ನೃತ್ಯ `ಗೋರುಖಾನ’ ನೃತ್ಯದ ಮುಖಾಂತರ ಕಾರ್ಯಕ್ರಮ ಸಂಪನ್ನಗೊಂಡಿತು.

ಸಮ್ಮೇಳನದ ಪರವಾಗಿ ಚಿರಂತನದ ಅಧ್ಯಕ್ಷೆ ಶ್ರೀಮತಿ ದೀಪಾ ರಾವ್ ಹಾಗೂ ಭರತ ನಾಟ್ಯ ಗುರುಗಳಾದ ವಿದುಷಿ ರಕ್ಷಾ ರಾಜಶೇಖರ್ ಅವರೊಂದಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಗಳನ್ನು ಅಭಿನಂದನಾ ಪೂರ್ವಕವಾಗಿ  ನೀಡಲಾಯಿತು.

error: Content is protected !!