ಹರಿಹರ, ಡಿ. 24- ಇದೇ ದಿನಾಂಕ 26 -27 ರಂದು ಬೆಳಗಾವಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 100 ನೇ ಅಧಿವೇಶನದಲ್ಲಿ ಅತಿಥಿಯಾಗಿ ಭಾಗವಹಿಸಲಿರುವ ಮಣಿಪುರದ ಮಾಜಿ ಮುಖ್ಯಮಂತ್ರಿ, ಮಣಿಪುರದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಓ.ಐಬೋಬಿ ಸಿಂಗ್ ಹಾಗೂ ಅವರ ಪತ್ನಿ, ಮಾಜಿ ಶಾಸಕರಾದ ಎಂ. ಲಂಧೋನಿ ದೇವಿ ಅವರನ್ನು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಅವರೊಂದಿಗೆ ಅಧಿವೇಶನದಲ್ಲಿ ಭಾಗವಹಿಸಲು ಹರಿಹರ ವಿಧಾನಸಭಾ ಕ್ಷೇತ್ರದ ಮುಖಂಡ ನಂದಿಗಾವಿ ಶ್ರೀನಿವಾಸ್ ನಾಳೆ ದಿನಾಂಕ 25 ರಂದು ಬೆಳಗಾವಿಗೆ ತೆರಳಲಿದ್ದಾರೆ.
December 26, 2024