ದಾವಣಗೆರೆ, ಡಿ.24- ನಗರದ ದೇವರಾಜ ಅರಸು ಬಡಾವಣೆ ‘ಸಿ’ ಬ್ಲಾಕ್, 3ನೇ ಮುಖ್ಯರಸ್ತೆ, 6ನೇ ತಿರುವಿನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ-
ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಇದೇ ದಿನಾಂಕ 29 ರ ಭಾನುವಾರದಿಂದ ಬರುವ ಜನವರಿ 5 ರವರೆಗೆ ಪೂಜ್ಯ ಶ್ರೀ ಕುದುಕುಂಜಿ ಮಹಾಬಲರಾವ್ ಪುಣ್ಯಸ್ಮರಣೆ ನಿಮಿತ್ತ `ಶ್ರೀಮದ್ ಭಾಗವತ ಪುರಾಣ ಪ್ರವಚನ ಸಪ್ತಾಹ’ವನ್ನು ಹಮ್ಮಿಕೊಳ್ಳಲಾಗಿದೆ.
ಭಾಗವತ ಪುರಾಣ ಪ್ರವಚನವು ಪ್ರತಿದಿನ ಸಂಜೆ 6-30 ರಿಂದ 8-00 ಗಂಟೆಯ ವರೆಗೆ ನಡೆಯಲಿದ್ದು, ನಾಡಿನ ಹಿರಿಯ ಪ್ರವಚನಕಾರರೂ, ಆಧ್ಯಾತ್ಮಿಕ ಚಿಂತಕರೂ ಆದ ಶ್ರೀ ಗೋಪಾಲಾಚಾರ್ ಮಣ್ಣೂರ್ ಇವರು ಉಪನ್ಯಾಸ ನೀಡುವರು.
ಆಸಕ್ತರು ಭಾಗವಹಿಸಿ ಅಪರೂಪವಾಗಿ ನಡೆಯುವ ಈ ಪ್ರವಚನ ಸಪ್ತಾಹ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರತಿಷ್ಠಾನದ ಮುಖ್ಯಸ್ಥರಾದ ಯೋಗ ಗುರು ರಾಘವೇಂದ್ರ ಗುರೂಜಿ ತಿಳಿಸಿದ್ದಾರೆ. ವಿವರಕ್ಕೆ 94484-22829 ಸಂಪರ್ಕಿಸಬಹುದು.