ಹರಪನಹಳ್ಳಿ, ಡಿ.24- ತಾಲ್ಲೂಕಿನ ಪಂಚಗಣಾಧೀಶರಲ್ಲಿ ಒಬ್ಬರಾದ ಅರಸೀಕೆರೆ ಶ್ರೀ ಕೋಲಶಾಂತೇಶ್ವರ ಸ್ವಾಮಿ ಕಾರ್ತಿಕೋತ್ಸವವು ಸಂಭ್ರಮದಿಂದ ನೆರವೇರಿತು.
ಶ್ರೀ ಶಾಂತಲಿಂಗ ದೇಶೀಕೇಂದ್ರ ಮಹಾಸ್ವಾಮೀಜಿ ಹಾಗೂ ಕೊಡ್ಲಿಪೇಟೆ ರುದ್ರಮುನಿ ಮಹಾಸ್ವಾಮೀಜಿ ದೀಪ ಹಚ್ಚುವ ಮೂಲಕ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು.
ಸಂಜೆ ಸ್ವಾಮಿಗೆ ಮಂಡಕ್ಕಿ, ಕೊಬ್ಬರಿ, ಬೆಲ್ಲ, ಉತ್ತತ್ತಿಯನ್ನು ದೇವರಿಗೆ ಅರ್ಪಿಸಲಾಯಿತು. ಸೋಮವಾರ ಬೆಳಗ್ಗೆಯಿಂದಲೇ ಜನರು ಸ್ವಾಮಿಯ ದೇವಸ್ಥಾನಕ್ಕೆ ಬಂದು ಹಣ್ಣು, ಕಾಯಿ, ಹೂ, ಹೋಳಿಗೆ ಎಡೆ ಅರ್ಪಿಸಿದರು.
ಸೋಮವಾರ ರಾತ್ರಿ ಶ್ರೀ ಕೋಲಶಾಂತೇಶ್ವರ ಸ್ವಾಮಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮೆರವಣಿಗೆ ನಡೆಸಲಾಯಿತು. ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ವೆಂಕಟೇಶ್ ಶೆಟ್ರು ಕುಟುಂಬದವರು ಲಕ್ಷ ಬತ್ತಿಗಳ ದೀಪವನ್ನು ಹಚ್ಚಿರುವುದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಮಾಜಿ ಸಂಸದರಾದ ವೈ.ದೇವೇಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವೈ. ಡಿ. ಸುಶೀಲಮ್ಮ ದೇವೇಂದ್ರಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ವಿಶಾಲಕ್ಷಮ್ಮ,ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ಮುಖಂಡರಾದ ಪ್ರಶಾಂತ್ ಪಾಟೀಲ್, ಲಕ್ಷ್ಮೀದೇವಿ ಅಣ್ಣಪ್ಪ, ವೈ.ಕೊಟ್ರೇಶ್, ಅಡ್ಡಿ ಚನ್ನವೀರಪ್ಪ, ವೆಂಕಟೇಶ್ ಶೆಟ್ರು, ಶಾಂತ ಪಾಟೀಲ್, ವೃಷಬೇಂದ್ರಯ್ಯ, ಎ. ಹೆಚ್. ಪಂಪಣ್ಣ, ಎ. ಹೆಚ್. ನಾಗರಾಜಪ್ಪ ಹಾಗೂ ಭಕ್ತಾಧಿಗಳು ಹಾಜರಿದ್ದರು.