ಹರಿಹರ, ಡಿ.24- ನಗರದ ತುಂಗಭದ್ರಾ ನದಿಯ ತಟದಲ್ಲಿರುವ ಶ್ರೀ ಸಂಗಮೇಶ್ವರ ಸ್ವಾಮಿ ಹಾಗೂ ಮಹೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಮಹೇಶ್ವರ ಜಾತ್ರಾ ಮಹೋತ್ಸವ ಜರುಗಿತು.
ಅರ್ಚಕ ಸಿದ್ದಯ್ಯ ಹಿರೆಮಠ ಮತ್ತು ಸಂಗಡಿಗರಿಂದ ವಿಶೇಷ ಪೂಜೆ ನೇರವೇರಿತು. ನಂತರ ಅನ್ನ, ಹಾಲು, ಬೆಲ್ಲ, ಬಾಳೆ, ಹಣ್ಣು ಪ್ರಸಾದ ವಿನಿಯೋಗ ನಡೆಯಿತು. ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ, ತಾಪಂ ಮಾಜಿ ಅಧ್ಯಕ್ಷ ಟಿ.ಜೆ.ಮುರುಗೇಶಪ್ಪ, ಮಾಜೇನಹಳ್ಳಿ ಗೌಡ್ರು ಚನ್ನಬಸಪ್ಪ, ಕಸಬಾ ಗೌಡ್ರು ಲಿಂಗಾರಾಜ್ ಪಾಟೀಲ್, ಮಹೇಶ್ವರ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಚೇತನ್ ಮೂರ್ಕಲ್, ಕಾರ್ಯದರ್ಶಿ ಕೊಂಡಜ್ಜಿ ಈಶ್ವರಪ್ಪ, ಸಮಿತಿಯ ಸದಸ್ಯರಾದ ಜಿ.ಕೆ. ವೀರಣ್ಣ, ಹೆಚ್.ಕೆ. ಸಂತೋಷ, ಕೆ.ಜಿ. ಶಿವಕುಮಾರ್ ಕಂಚಿಕೇರಿ, ಶಿವಕುಮಾರ್ ಸ್ವಾಮಿ, ಕರಿಬಸಪ್ಪ ಕಂಚಿಕೇರಿ, ಮೂರ್ಕಲ್ ಚಂದನ್, ಕುಮಾರ್ ಸ್ವಾಮಿ, ಮಲ್ಲೇಶಪ್ಪ, ಹೆಚ್.ರೇಣುಕಾ ಪ್ರಸಾದ್, ವಿಜಯಕುಮಾರ್, ಶೇರಾಪುರ ರಾಜಪ್ಪ, ಸಿದ್ದೇಶ್ ಗೌಡ್ರು, ಬಿಳೆಬಾಳು ನಾಗರಾಜ್, ಮಲ್ಲೇಶ್ ಚಂದ್ರಶೇಖರ್, ಎಂ. ಚಿದಾನಂದ ಕಂಚಿಕೇರಿ, ಸಪ್ಪಿರೊಟ್ಟಿ ಮಹೇಂದ್ರ ಇತರರು ಹಾಜರಿದ್ದರು.