ಮಲೇಬೆನ್ನೂರು, ಡಿ. 24- ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ರತ್ನಮ್ಮ ಗಂಗಪ್ಪ ತೋಟಿಗೇರ ಮತ್ತು ಉಪಾಧ್ಯಕ್ಷರಾಗಿ ಕಡತಿ ನಿಂಗಪ್ಪ ಅವರು ಮಂಗಳವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರತ್ನಮ್ಮ 9 ಮತ ಪಡೆದು ಆಯ್ಕೆಯಾದರೆ, ಪ್ರತಿ ಸ್ಪರ್ಧಿ ವನಜಾಕ್ಷಮ್ಮ 8 ಮತ ಪಡೆದು ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿಂಗಪ್ಪ 9 ಮತ ಪಡೆದು ಆಯ್ಕೆಯಾದರೆ, ಪ್ರತಿ ಸ್ಪರ್ಧಿ ಭರಮಣ್ಣ 8 ಮತ ಪಡೆದು ಪರಾಭವಗೊಂಡರು. ಕರಿಯಮ್ಮ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ಮತ್ತು ಪರಮೇಶ್ವರಪ್ಪ ರಾಜೀನಾಮೆಯಿಂದ ಉಪಾಧ್ಯಕ್ಷ ಸ್ಥಾನ ತೆರವಾಗಿದ್ದವು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ಬಿ.ಕೆ. ಗಿರೀಶ್ ಅವರು ಚುನಾವಣಾಧಿಕಾರಿ ಯಾಗಿದ್ದರು. ಪಿಡಿಓ ಜಿ.ಆರ್. ಸುನೀಲ್ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.