ಮಲೇಬೆನ್ನೂರು, ಡಿ. 24 – ಜಿ.ಪಂ. ದಾವಣಗೆರೆ ಮತ್ತು ಸಮಾಜ ಕಲ್ಯಾಣ ಇಲಾಖೆ, ಹರಿಹರ ಹಾಗೂ ಜಿಗಳಿ ಗ್ರಾ.ಪಂ. ಇವರ ಸಹಯೋಗದಲ್ಲಿ ಜಿ.ಬೇವಿನಹಳ್ಳಿ ಗ್ರಾಮದಲ್ಲಿ ಚನ್ನಗಿರಿಯ `ಸುವರ್ಣ ಕರ್ನಾಟಕ ಜನ ಜ್ಯಾಗೃತಿ’ ಕಲಾ ತಂಡದಿಂದ ಅಸ್ಪೃಶ್ಯತೆ ನಿವಾರಣೆ ಮತ್ತು ಎಸ್ಸಿ -ಎಸ್ಟಿ ದೌರ್ಜನ್ಯ ಕಾಯ್ದೆ ಬಗ್ಗೆ ಬೀದಿ ನಾಟಕ ಹಾಗೂ ಜಾಗೃತಿ ಗೀತೆಗಳ ಮೂಲಕ ಜನರಲ್ಲಿ ಅರಿವು ಮೂಡಿಸಲಾಯಿತು.
ಕಲಾವಿದರಾದ ಜಿ ಎನ್. ಹೇಮಂತ್, ದ್ವಾರಕೀಶ್, ಮಲ್ಲೇಶಪ್ಪ, ರಾಮು, ವಿನೋದ, ಸುಪ್ರಿಯ, ಸುಲೋಚನ, ರಾಧಿಕ ಮತ್ತು ಗ್ರಾ ಪಂ ಸಿಬ್ಬಂದಿ ಹಾಗೂ ಆನಂದಗೌಡ ಭಾಗವಹಿಸಿದ್ದರು.