ಕನಕ ಜಯಂತಿ ಯಶಸ್ವಿಗೆ ಕರೆ

ಕನಕ ಜಯಂತಿ ಯಶಸ್ವಿಗೆ ಕರೆ

ಜಗಳೂರು, ಡಿ.24- ದಾವಣಗೆರೆಯಲ್ಲಿ ಬರುವ ಜನವರಿ 5 ರಂದು ನಡೆಯಲಿರುವ 537 ನೇ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಕುರುಬ ಸಮಾಜದ ಮುಖಂಡ ಮಾಜಿ‌ ಮೇಯರ್ ಗೋಣೆಪ್ಪ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲೂಕಿನಾದ್ಯಂತ ಪ್ರವಾಸ ಕೈಗೊಂಡು ಕುರುಬ ಸಮಾಜದ ಬಂಧುಗಳಿಗೆ ಆಹ್ವಾನಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ವಿವಿಧ ಗಣ್ಯರುಗಳು  ಭಾಗವಹಿಸಲಿದ್ದಾರೆ.ಶೋಷಿತ ಸಮುದಾಯಗಳ ಜನಜಾಗೃತಿ ಸಮಾವೇಶ ಜರುಗಲಿದೆ ಎಂದು ಹೇಳಿದರು.

ಮುಖಂಡ ಕೆ.ಪಿ.ಪಾಲಯ್ಯ ಮಾತನಾಡಿ, ಶೋಷಿತ ವರ್ಗಗಳು ಜಾಗೃತರಾಗಬೇಕಿದೆ. ಭಕ್ತ ಕನಕದಾಸರು ಜಾತಿಗೆ ಸೀಮಿತವಲ್ಲ ಪ್ರತಿ ಯೊಬ್ಬರೂ ದಾರ್ಶನಿಕ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿಳಿಚೋಡು ಒಮ್ಮಣ್ಣ , ಮಡ್ರಳ್ಳಿ ರೇವಣಸಿದ್ದಪ್ಪ,  ಎಸ್‌.ಎಲ್. ಆನಂದಪ್ಪ, ಹದಡಿ ಜಿ.ಸಿ. ನಿಂಗಪ್ಪ, ಹಾಲೇಕಲ್ಲು ಎಸ್‌.ಟಿ. ಅರವಿಂದ್, ಇಟ್ಟಿಗುಡಿ ಮಂಜುನಾಥ್, ಬಿ. ಲಿಂಗರಾಜ್, ಕೆ. ರೇವಣ್ಣ,  ಹಾಲೇಕಲ್ಲು ಗೋಣೆಪ್ಪ, ಮಂಜು ಕೊಗ್ಗನೂರು, ವಿನಯ್ ಜೋಗಪ್ಪನವರ್, ಬಿ.ಹೆಚ್. ನವೀನ್ ಕುಮಾರ್ ಮತ್ತಿತರರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!