ದಾವಣಗೆರೆ, ಡಿ.23- ಶೈಕ್ಷಣಿಕ ಕ್ಷೇತ್ರದಲ್ಲಿ ಸುದೀರ್ಘ ವಿಶಿಷ್ಟ ಸೇವೆ ಸಲ್ಲಿಸಿ ಸಾಧನೆ ಮಾಡಿರುವ ಸಾಧಕ, ಶಿಕ್ಷಣ ತಜ್ಞರು ಮತ್ತು ವಿಶ್ರಾಂತ ಪ್ರಾಂಶುಪಾಲರೂ, ಸಿರಿ ಗೆರೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂ ಸ್ಥೆಯ ಆಡಳಿತಾಧಿಕಾರಿಗಳೂ ಆಗಿರುವ ಡಾ. ಹೆಚ್.ವಿ. ವಾಮದೇವಪ್ಪ ಅವರು ಬೆಂಗಳೂ ರಿನ ಪ್ರತಿಷ್ಠಿತ ಕನ್ನಡ ಫಿಲ್ಮ್ ಚೇಂಬರ್ ಅವರು ಸಮಾಜದಲ್ಲಿ ತನ್ನದೇ ಆದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಕೊಡ ಮಾಡುವ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಭಾಜರಾಗಿದ್ದಾರೆ.
ನಾಡಿದ್ದು ದಿನಾಂಕ 25 ರ ಬುಧವಾರ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಕನ್ನಡ ಫಿಲ್ಮ್ ಚೇಂಬರ್ ಸಂಸ್ಥೆ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಹಾಗೂ ಸ್ಯಾಂಡಲ್ ವುಡ್ ಅವಾರ್ಡ್ 2024 ಕಾರ್ಯಕ್ರಮದಲ್ಲಿ ಡಾ. ಹೆಚ್.ವಿ. ವಾಮದೇವಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಲಾಗುವುದು.
ವಾಮದೇವಪ್ಪ ಅವರು ದಾವಣಗೆರೆಯ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಲ್ಲಿಸಿದ ಸುದೀರ್ಘ 33 ವರ್ಷಗಳ ಸೇವೆಯಲ್ಲಿ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಸಹ ಪ್ರಾಧ್ಯಾಪಕರಾಗಿ ಹಾಗೂ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದು, ಇವರ ಬೋಧನೆಯ ಪ್ರಭಾವ ದಿಂದ ನಾಡಿನಾದ್ಯಂತ ಅನೇಕ ಶಿಷ್ಯರು ಉನ್ನತೋನ್ನತ ಹುದ್ದೆಗಳನ್ನು ಅಲಂಕರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಶೈಕ್ಷಣಿಕ ಮನೋವಿಜ್ಞಾನ ವಿಷಯದ ಕುರಿತಾಗಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಆಕರ ಗ್ರಂಥಗಳ ಕೊರತೆ ಇದ್ದ ಸಂದರ್ಭದಲ್ಲಿ ಮನೋವಿಜ್ಞಾನ ಗ್ರಂಥ ರಚಿಸಿ ಅದರ ಕೊರತೆಯನ್ನು ನೀಗಿಸಿದವರು
ಡಾ. ವಾಮದೇವಪ್ಪನವರು. ಇವರ ಮಾರ್ಗ ದರ್ಶನದಲ್ಲಿ ಸುಮಾರು 15 ಸಂಶೋಧನಾರ್ಥಿ ಗಳು ಪಿ.ಹೆಚ್.ಡಿ. ಪದವಿ ಪಡೆದಿದ್ದಾರೆ. ಹಾಗೂ 5 ವಿದ್ಯಾರ್ಥಿಗಳಿಗೆ ಎಂ.ಫಿಲ್. ಪದವಿ ಪಡೆ ಯುವಲ್ಲಿ ಇವರು ಮಾರ್ಗದರ್ಶನ ನೀಡಿದ್ದಾರೆ.
ಶೈಕ್ಷಣಿಕ ಮನೋವಿಜ್ಞಾನಕ್ಕೆ ಸಂಬಂಧಿಸಿ ದಂತೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾ ದಂತಹ ಇವರ 16 ಪುಸ್ತಕಗಳು ಪ್ರಕಟ ಗೊಂಡಿವೆ. ಶೈಕ್ಷಣಿಕ ಸಂಶೋಧನೆಗೆ ಸಂಬಂಧಿಸಿದಂತೆ ಸುಮಾರು 40ಕ್ಕಿಂತ ಹೆಚ್ಚು ಲೇಖನಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.
ಇವರ ಈ ಎಲ್ಲಾ ವಿಶಿಷ್ಟ ಸೇವೆಗಾಗಿ ಶಿಕ್ಷಣ ಭೂಷಣ ಪ್ರಶಸ್ತಿ, ದಾವಣಗೆರೆ ಜಿಲ್ಲಾಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅನುಪಮ ಗುರು ಚೇತನ ಪ್ರಶಸ್ತಿ, ಸೋಮೇಶ್ವರ ಶಿಕ್ಷಣ ಸಿರಿ, ಸಾಹಿತ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ, ದಾವಣಗೆರೆ ಮಹಾನಗರ ಪಾಲಿಕೆಯಿಂದ 66ನೇ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ರಾಜ್ಯ ಮಟ್ಟದ ಹೆಚ್.ಎನ್. ಪ್ರಶಸ್ತಿ ಹೀಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅನೇಕ ಪ್ರಶಸ್ತಿಗಳು ಹಾಗೂ ಬಹುಮಾನಗಳು ಸಂದಿವೆ. ಇದೀಗ ಬೆಂಗಳೂರಿನ ಕನ್ನಡ ಫಿಲ್ಮ್ ಚೇಂಬರ್ ಸಂಸ್ಥೆಯು ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಂತಸವನ್ನುಂಟು ಮಾಡಿದೆ. ಇವರ ಅಮೋಘ ಸೇವೆಗೆ ಮತ್ತೊಂದು ಕೀರ್ತಿ ಮುಡಿಗೇರಿದಂತಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಸಿ.ಜಿ. ಜಗದೀಶ್ ಕೂಲಂಬಿ ತಿಳಿಸಿದ್ದಾರೆ.