ಕೊಳೆತ, ಕೊಳೆಯಲಾರದ ಕಸದ ಸ್ವಚ್ಛತೆಗೆ ಮೇಯರ್ ಚಾಲನೆ

ಕೊಳೆತ, ಕೊಳೆಯಲಾರದ ಕಸದ ಸ್ವಚ್ಛತೆಗೆ ಮೇಯರ್ ಚಾಲನೆ

ದಾವಣಗೆರೆ, ಡಿ. 23- ನಗರದಲ್ಲಿ ಅನೇಕ ವರ್ಷಗಳಿಂದ ಕೊಳೆತು ಹೋಗಿರುವ ಕಸವನ್ನು  ಸ್ವಚ್ಛಗೊಳಿಸುವುದು ಮತ್ತು  ಮಣ್ಣು ಹಾಗೂ ಇತರೆ ಕೊಳೆಯಲಾರದ ವಸ್ತುಗಳು ಇರುವಂತಹ ಜಾಗಗಳನ್ನು ಸ್ವಚ್ಛಗೊಳಿಸುವ  ಕಾರ್ಯಕ್ಕೆ  ಮಹಾಪೌರ ಚಮನ್ ಸಾಬ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ರೇಣುಕಾ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ  ಆಶಾ ಉಮೇಶ್, ಮುಖಂಡರಾದ  ಅಯ್ಯಪ್ಪ ದಾದು, ಸಾಗರ್,  ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!