ಸ್ಥಳೀಯ ತರಬೇತುದಾರರನ್ನು ನೇಮಿಸುವಂತೆ ಕರವೇ ಮನವಿ

ಸ್ಥಳೀಯ ತರಬೇತುದಾರರನ್ನು ನೇಮಿಸುವಂತೆ ಕರವೇ ಮನವಿ

ದಾವಣಗೆರೆ, ಡಿ.23- ತಾಲ್ಲೂಕಿನ ವಡ್ಡನಹಳ್ಳಿ ಗ್ರಾಮದ ಅಂಗವಿಕಲರ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಸ್ಥಳೀಯ ತರಬೇತುದಾರರನ್ನು ನೇಮಿಸುವಂತೆ ಒತ್ತಾಯಿಸಿ ಈಚೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅಪರಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಇದೇ ವೇಳೆ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಜಮನಹಳ್ಳಿ ನಾಗರಾಜ್ ಅವರು, ತರಬೇತಿ ಕೇಂದ್ರದಲ್ಲಿ ಹೊರ ರಾಜ್ಯಗಳ ಸಿಬ್ಬಂದಿಯನ್ನು ನೇಮಿಸಿದರೆ ಅವರಿಗೆ ಕನ್ನಡ ಬರುವುದಿಲ್ಲ. ಹಾಗಾಗಿ ಇಲ್ಲಿನ ಸ್ಥಳೀಯರನ್ನೇ ನೇಮಕಗೊಳಿಸಿದರೆ ವಿದ್ಯಾರ್ಥಿಗಳೊಂದಿಗೆ ಸಂವಹನ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.

error: Content is protected !!