ರಾಣೇಬೆನ್ನೂರು,ಡಿ.23- ಮಹಾನ್ ಪುರುಷರ ಮೂರ್ತಿ ಸ್ಥಾಪಿಸಿದರೆ ಸಮಾಜದ ಅಭಿ ವೃದ್ಧಿ ಅಥವಾ ಸಂಘಟನೆ ಆಗ ಲಾರದು ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜ ನಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ಹಲಗೇರಿ ರಸ್ತೆಯ ಹೊಸ ರಾಷ್ಟ್ರೀಯ ಹೆದ್ದಾರಿ ಬಳಿ ನೂತನವಾಗಿ ಪ್ರತಿಷ್ಠಾಪಿಸಿದ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನೆ ನಂತರ ಹೊರಗುಡಿಯ ಶ್ರೀ ಬೀರೇಶ್ವರ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.
ಹಾಗಾಗಿ ನಾನು ಯಾವುದೇ ಹೋರಾಟ ಗಾರರ, ದಾರ್ಶನಿಕರ, ಮಹಾತ್ಮರ ಮೂರ್ತಿ ಸ್ಥಾಪನೆ ಕಾರ್ಯಕ್ರಮಕ್ಕೆ ಹೋಗಲ್ಲ. ಇಲ್ಲೂ ಸಹ ಆ ಸ್ಥಳಕ್ಕೆ ಹೋಗದೇ ಸಮಾರಂಭದಲ್ಲಿ ಭಾಗವ ಹಿಸಿದ್ದೇನೆ ಎಂದು ಸ್ವಾಮೀಜಿ ಹೇಳಿದರು.
ಮಹಾತ್ಮರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವುಗಳಿಂದ ಮಾದರಿ ಬದುಕು ನಡೆಸಿದರೆ ಸಮಾಜದ ಅಭಿವೃದ್ಧಿ ಆಗುತ್ತದೆ, ಜೊತೆಗೆ ಸಂಘಟನೆ ಸಾಧ್ಯವಾಗಲಿದೆ. ದೇವರಗುಡ್ಡದಲ್ಲಿ ಇಂತಹದೇ ರಾಯಣ್ಣ ಮೂರ್ತಿ ಸ್ಥಾಪನೆಗೆ ಮುಖ್ಯಮಂತ್ರಿಗಳು ಆಗಮಿಸಿದ್ದರೂ ಸಹ ನಾವು ಹೋಗಲಿಲ್ಲ ಎಂಬುದನ್ನು ಶ್ರೀಗಳು ಪ್ರಸ್ತಾಪಿಸಿದರು.
ಉಪಸಭಾಪತಿ ರುದ್ರಪ್ಪ ಲಮಾಣಿ ನಾಮಫಲಕ, ಶಾಸಕ ಪ್ರಕಾಶ ಕೋಳಿವಾಡ ಸಮಾರಂಭವನ್ನು ಮತ್ತು ಮಾಜಿ ಶಾಸಕ ಅರುಣ ಪೂಜಾರ ರಾಯಣ್ಣ ಮೂರ್ತಿ ಉದ್ಘಾಟಿಸಿದರು. ಕಾಂಗ್ರೆಸ್ ವಕ್ತಾರ ನಿಖಿತ್ ಮೌರ್ಯ ಉಪನ್ಯಾಸ ನೀಡಿದರು.
ರೈತ ಮುಖಂಡ ರವೀಂದ್ರಗೌಡ ಪಾಟೀಲ, ನಗರಸಭೆ ಸದಸ್ಯ ನಿಂಗಪ್ಪ ಕೋಡಿಹಳ್ಳಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣ ನವರ, ಆನಂದ ಹುಲಬನ್ನಿ, ಬಸವರಾಜ ಕಂಬಳಿ, ಚಂದ್ರಪ್ಪ ಬೇಡರ ಮತ್ತಿತರರಿದ್ದರು.