ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ : ಶೇ.93.32ರಷ್ಟು

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ : ಶೇ.93.32ರಷ್ಟು

ಹರಪನಹಳ್ಳಿ, ಡಿ.23- ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಬಿ90) ನಿರ್ದೆಶಕರ ಸ್ಥಾನಗಳಿಗೆ ಭಾನುವಾರ ನ್ಯಾಷನಲ್ ಸ್ಕೂಲ್‍ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಎರಡು ಗುಂಪುಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟು ಜಿದ್ದಾಜಿದ್ದಿನಿಂದ ಕೂಡಿತ್ತು.

ಒಟ್ಟು 12 ನಿರ್ದೆಶಕರ ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 8 ಸ್ಥಾನಗಳಿಗೆ ಚುನಾವಣೆ ನಡೆಯಿತು, 19 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಶೇ.93.32 ಮತದಾನ: ಮತದಾನಕ್ಕೆ ಮೂರು ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿತ್ತು, ಒಟ್ಟು 1018 ಮತದಾರರಿದ್ದು, ಇದರಲ್ಲಿ 950 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು, ಶೇ.93.32 ರಷ್ಟು ಮತದಾನವಾಗಿದೆ.

ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತ ದಾರರು ಹುರುಪಿನಿಂದ ಮತ ಚಲಾಯಿಸಿದರು. ಕಾಂಗ್ರೆ ಸ್‍ನಲ್ಲಿ ತಲಾ 8 ಜನರ 2 ಗುಂಪುಗಳು ಪ್ರತಿಸ್ಪರ್ಧಿಗಳಾಗಿ ದ್ದಾರೆ, 2 ಗುಂಪುಗಳು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳೆಂದು ಘೋಷಿಸಿಕೊಂಡಿದ್ದಾರೆ ಉಳಿದ ಮೂವರು ಪ್ರತ್ಯೇಕವಾಗಿ ಸ್ಪರ್ಧಿಸಿದ್ದಾರೆ.

ಉದ್ದಾರ ರಂಗಪ್ಪ, ಉಮಾಮಹೇಶ್ವರಿ, ಕಳ್ಳಿಬಾವಿ ಶಫಿವುಲ್ಲಾ, ಗಾಟಿನ ಬಸವರಾಜ, ಎಚ್.ದೇವೇಂದ್ರಪ್ಪ, ನಾಲ್ಬಂದಿ ನಿಸಾರ, ಕೆ.ಮಹಬೂಬ್ ಬಾಷಾ, ಎಂ.ಸುಮಂಗಳಾ ಇವರು ಕಾಂಗ್ರೆಸ್‍ನ ಒಂದು ಗುಂಪಿನ ಅಭ್ಯರ್ಥಿಗಳಾಗಿದ್ದಾರೆ.

ಇನ್ನೊಂದು ಗುಂಪಿನಲ್ಲಿ ಟಿ.ಅಹಮ್ಮದ್ ಹುಸೇನ್, ಚಿಕ್ಕೇರಿ ವೆಂಕಟೇಶ, ಜೋಗಿನ ಜಯಶ್ರೀ, ತಿಮ್ಮಲಾಪುರದ ರವಿಶಂಕರ್, ಪೂಜಾರ ನಾಗಪ್ಪ, ಬಾವಿಕಟ್ಟಿ ಭರಮಪ್ಪ, ಜಿ.ಸುಜಾತ, ಜಿ.ಹನುಮಂತಪ್ಪ ಗುರುತಿಸಿಕೊಂಡಿದ್ದಾರೆ.

ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಿತು, ಸಹಕಾರ ಇಲಾಖೆಯ ಜಿ.ಎಸ್.ಸುರೇಂದ್ರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

error: Content is protected !!