ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮುಂಗಾರು ಹಂಗಾಮಿನ ಭತ್ತದ ಕಟಾವು ಭರದಿಂದ ಸಾಗಿದ್ದು, ಭತ್ತದ ಕಟಾವು ಆಗಿ ಖಾಲಿ ಇರುವ ಗದ್ದೆಗಳಲ್ಲಿ ಕುರಿಗಳನ್ನು ಮೇಯಿಸಲು ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಕುರಿಗಾಯಿಗಳು ತಮ್ಮ ಕುರಿ ಹಿಂಡುಗಳು ಹೊಡೆದುಕೊಂಡು ಬಂದಿದ್ದಾರೆ. ಮಂಗಳವಾರ ಮಲೇಬೆನ್ನೂರು-ಜಿಗಳಿ ರಸ್ತೆಯಲ್ಲಿ ಮೇವು ಹರಸಿ ಹೋಗುತ್ತಿದ್ದ ಕುರಿ ಹಿಂಡುಗಳು ಬಾಯಾರಿಕೆ ತೀರಿಸಿಕೊಳ್ಳಲು ರಸ್ತೆ ಪಕ್ಕದ ಅಡಿಕೆ ತೋಟದ ಗುಂಡಿಗಳಲ್ಲಿ ನಿಂತಿದ್ದ ನೀರನ್ನು ಕುಡಿಯುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿತು.
December 22, 2024