ಹವಾಮಾನ ವೈಪರೀತ್ಯದಿಂದ ಅಡಕೆ ಬೆಳೆಗೆ ಹಾನಿ ; ಬೆಳೆಗಾರರ ರಕ್ಷಣೆ

ಹವಾಮಾನ ವೈಪರೀತ್ಯದಿಂದ ಅಡಕೆ ಬೆಳೆಗೆ ಹಾನಿ ; ಬೆಳೆಗಾರರ ರಕ್ಷಣೆ

ಬೆಳಗಾವಿ/ ದಾವಣಗೆರೆ, ಡಿ. 13- ಅಡಕೆ ಬೆಳೆಗೆ ಚುಕ್ಕೆ ರೋಗ ಹಾಗೂ ಇತರೆ ರೋಗದಿಂದ ಬೆಳೆಯ ಇಳುವರಿ ಕುಂಠಿತವಾಗಿರುವುದು ಗಮನಕ್ಕೆ ಬಂದಿದ್ದು, ರೋಗ ನಿವಾರಣೆಗೆ 50 ಲಕ್ಷ ಮಂಜೂರು ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದರು.

ಬೆಳಗಾವಿಯ ಸುವರ್ಣ ಸೌಧದಲ್ಲಿನ ಚಳಿಗಾಲದ ಅವರು ಅಧಿವೇಶನದಲ್ಲಿ ಶಾಸಕರುಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು. 

ಬದಲಾದ ಹವಾಮಾನ ವೈಪರೀತ್ಯಗಳಿಂದ 53 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಹಾಗೂ ಇತರೆ ಬಾಧೆ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಹಲವಾರು ಸಭೆಗಳನ್ನು ಸಂಬಂಧ ಪಟ್ಟವರೊಂದಿಗೆ ಮಾಡಲಾಗಿದೆ. ರೋಗದ ನಿವಾರಣೆಗೆ ಔಷಧ ಕಂಡು ಹಿಡಿಯಲು ಸೂಚಿಸಲಾಗಿದ್ದು ಶಿವಮೊಗ್ಗ ವಿವಿಗೆ 50 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ ಎಂದರು.

ಶೇ.18 ರಷ್ಟು ಹವಾಮಾನ ವೈಪರೀತ್ಯದಿಂದಾಗಿ ಘಟ್ಟ ಪ್ರದೇಶದ ಕೆಳ ಭಾಗದಲ್ಲಿ ಅಡಕೆ ಬೆಳೆಯುವ ಪ್ರದೇಶದಲ್ಲಿ ಅಡಕೆಗೆ ಎಲೆ ಚುಕ್ಕಿರೋಗ, ಚುಕ್ಕಿರೋಗ ಇದ್ದು, ಇದು ಅಡಕೆ ಬೆಳೆಯುವ ಪ್ರದೇಶಕ್ಕೂ ಆವರಿಸಿದೆ.  ಅಡಕೆ ಬೆಳೆ ರೋಗ ತಡೆ ಸೇರಿದಂತೆ, ಬೆಳೆಯ ರಕ್ಷಣೆಗೆ, ಸಬ್ಸಿಡಿಗೆ ಅಗತ್ಯ ಕ್ರಮಗಳನ್ನು ಕೈ ಗೊಳ್ಳಲಾಗಿದೆ. ಅಡಕೆ ಬೆಳೆಗಾರರ ಹಿತ ಕಾಪಾಡಲು ಸರ್ಕಾರ ಬದ್ದವಾಗಿದೆ ಎಂದು ಪ್ರಶ್ನಿಸಿದ ಶಾಸಕರುಗಳಿಗೆ ತಿಳಿಸಿದರು.

error: Content is protected !!