ಅದಾನಿ ಮೇಲಿನ ಲಂಚ ಪ್ರಕರಣ : ತನಿಖೆಗೆ ಒತ್ತಾಯ

ಅದಾನಿ ಮೇಲಿನ ಲಂಚ ಪ್ರಕರಣ : ತನಿಖೆಗೆ ಒತ್ತಾಯ

ಜಿಲ್ಲಾ ಕಮ್ಯುನಿಸ್ಟ್ ಪಕ್ಷದಿಂದ ನಗರದಲ್ಲಿ ಪ್ರತಿಭಟನೆ

ದಾವಣಗೆರೆ, ಡಿ. 10- ಅದಾನಿ ಮೇಲಿನ ಲಂಚ ಪ್ರಕರಣದ ಕುರಿತು, ಜೆಪಿಸಿ ಮೂಲಕ ತನಿಖೆ ನಡೆಸಲು ಒತ್ತಾಯಿಸಿ ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಆಗ್ರಹಿಸಿ, ಕೋಮು ಭಾವನೆ ಕೆರಳಿಸಿ ಹಿಂಸಾಚಾರಕ್ಕೆ ಪ್ರಚೋದಿಸುತ್ತಿರುವುದನ್ನು ತಡೆಗಟ್ಟಲು ಒತ್ತಾಯಿಸಿ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ಜನ ವಿರೋಧಿ ಆಡಳಿತವನ್ನು ಖಂಡಿಸಿ ಮಾತನಾಡಿದ ‌ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು, ವಿಶ್ವಮಾನವ ಹಕ್ಕುಗಳ ದಿನವಾದ ಡಿಸೆಂಬರ್ 10 ರಂದು ಪ್ರತಿಭಟನೆ ನಡೆಸಿ ಸಿಪಿಐ ದಾವಣಗೆರೆ ಜಿಲ್ಲಾ ಮಂಡಳಿ ವತಿಯಿಂದ ದಾವಣಗೆರೆ ಉಪ ವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಇಲ್ಲಿನ ಅಶೋಕ ರಸ್ತೆಯ ಪಂಪಾಪತಿ ಭವನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಘೋಷಣೆಗಳನ್ನು ಕೂಗುತ್ತಾ ಸಾಗಿದ ಸಿಪಿಐ ಕಾರ್ಯಕರ್ತರು ಗಾಂಧಿ ಸರ್ಕಲ್, ಹಳೆ ಬಸ್ ನಿಲ್ದಾಣದ ಮೂಲಕ ದಾವಣಗೆರೆ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಅಲ್ಲಿ ಬಹಿರಂಗ ಸಭೆ ನಡೆಸಿ ಮನವಿ ಸಲ್ಲಿಸಲಾಯಿತು.

ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಕಾಂ ಹೆಚ್ ಜಿ ಉಮೇಶ್, ಜಿಲ್ಲಾ ಮಂಡಳಿ ಸದಸ್ಯ ಕಾಂ ಪಿ. ಷಣ್ಮುಖಸ್ವಾಮಿ,ಕಾಂ ಐರಣಿ ಚಂದ್ರು ಮಾತನಾಡಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಎರಗುಂಟೆ ಸುರೇಶ್, ಎಚ್.ಎಸ್. ಚಂದ್ರು, ನಿಟುವಳ್ಳಿ ಬಸವರಾಜ್, ಸಿ.ರಮೇಶ್, ಬಿ.ಕಲ್ಪನಳ್ಳಿ ವಸಂತ ಕುಮಾರ್, ಕೆರನಹಳ್ಳಿ ರಾಜು, ರಂಗನಾಥ್, ಚಿನ್ನಪ್ಪ, ವಿ. ಲಕ್ಷ್ಮಣ, ಸಿದ್ದಲಿಂಗೇಶ್, ರುದ್ರೇಶ್ ಲೋಕಿಕೆರೆ, ತಿಪ್ಪೇಸ್ವಾಮಿ, ಉಮೇಶ್ ಸೇರಿದಂತೆ, ಇತರರು ಭಾಗವಹಿಸಿದ್ದರು.

error: Content is protected !!