ದಾವಣಗೆರೆ, ಡಿ. 8- ಕುಂದುವಾಡ ಕೆರೆ ವಾಯು ವಿಹಾರ ಬಳಗದಿಂದ ನಗರದಿಂದ ಹರಿಹರಕ್ಕೆ ಹಮ್ಮಿ ಕೊಂಡಿದ್ದ ಕಾಲ್ನಡಿಗೆ ಜಾಥ ಯಶಸ್ವಿಯಾಗಿ ನಡೆಯಿತು.
500 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಜಾಥಾವು ದಾವಣಗೆರೆಯಿಂದ ಬೆಳಿಗ್ಗೆ 5.30 ಕ್ಕೆ ಸರಿಯಾಗಿ ಹೊರಟು 7.30 ಕ್ಕೆ ಹರಿಹರಕ್ಕೆ ತಲುಪಿತು.
ದೇವಸ್ಥಾನದ ಆವರಣದಲ್ಲಿ ವಾಯು ವಿಹಾರಿಗಳಿಗೆ ಯೋಗ ಮತ್ತು ಧ್ಯಾನ ಮಾಡಿಸಲಾಯಿತು. ನಂತರ ಉಪಹಾರ ಸೇವಿಸಿ ದಾವಣಗೆರೆಗೆ ಹಿಂತಿರುಗಲಾಯಿತು.
ಬಳಗದ ಮುಖ್ಯಸ್ಥ ಜೆ. ಈಶ್ವರಸಿಂಗ್ ಕವಿತಾಳ್, ಬಿ.ಹೆಚ್. ಶಿವಕುಮಾರ್, ಸೋಮಶೇಖರ ಬಾಬು, ಮುರುಳಿಧರ ಗುಪ್ತ, ಜಯಣ್ಣ ಆಲೂರು, ಜಿ.ಎಸ್. ರಾಜರಾವ್, ವಿಜಯಕುಮಾರ್ ಬಾಳೆಹೊಲ, ರಮೇಶ ಕೆ.ಹೆಚ್. ಪ್ರಕಾಶ್, ಅಧಿಕಾರಿ ಮಹಾಲಿಂಗೇಶ್, ಪ್ರಭು ಜಯಣ್ಣ ಆಲೂರು, ಬಸವರಾಜ ಆಲೂರು, ರಾಕೇಶ್, ಮಲ್ಲಿಕಾರ್ಜುನ ಕಂಬ್ಬಿ, ನಿರಂಜನ ಮೂರ್ತಿ, ಥಾಮೊಸರ, ರಾಮಮೂರ್ತಿ, ಅರುಣ ಸೇರಿದಂತೆ ಇತರರು ಜಾಥದಲ್ಲಿದ್ದರು.