ದಾವಣಗೆರೆ, ಡಿ.3- ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ಇತ್ತೀಚೆಗೆ ನೂತನ ನಾಮನಿರ್ದೇಶನಗೊಂಡ ಸದಸ್ಯರುಗಳು ಗಣಿ, ಭೂವಿಜ್ಞಾನ, ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಇಂದು ಭೇಟಿ ಮಾಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ನಿಮ್ಮಗಳ ಸೇವಾ ಅವಧಿಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯವು ಗಮನಾರ್ಹ ಪ್ರಗತಿ ಸಾಧಿಸಲಿ ಹಾಗೂ ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಆಶಿಸಿ ನೂತನ ಸದಸ್ಯರುಗಳಿಗೆ ಸನ್ಮಾನಿಸಿ ಶುಭ ಹಾರೈಸಿದರು.
ನೂತನ ನಾಮನಿರ್ದೇಶಿತ ಸದಸ್ಯರಾದ
ಡಾ ಪ್ರಶಾಂತ್ ಎನ್. ಸಿ., ದ್ಯಾಮಪ್ಪ, ಶಾಬೀರ್ ಅಲಿಖಾನ್, ಡಾ ಜಿ. ಕೆ. ಪ್ರೇಮ, ತಿಪ್ಪೇಸ್ವಾಮಿ ಎಚ್., ಪ್ರಶಾಂತ್ ಆರ್. ಟಿ. ಹಾಗೂ ದವನ್ ಕಾಲೇಜು ಕಾರ್ಯದರ್ಶಿ ವೀರೇಶ್ ಪಟೇಲ್ ಉಪಸ್ಥಿತರಿದ್ದರು.