ವ್ಯಾಪಾರ ವಿನಿಮಯಗಳಿಲ್ಲದ ಬದುಕು ಅಸಾಧ್ಯ

ವ್ಯಾಪಾರ ವಿನಿಮಯಗಳಿಲ್ಲದ ಬದುಕು ಅಸಾಧ್ಯ

ರಾಜ್ಯಮಟ್ಟದ ವಾಣಿಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಆರ್. ಸುಪ್ರಿಯಾ 

ದಾವಣಗೆರೆ, ನ. 2- ವ್ಯಾಪಾರ ವಿನಿಮಯಗಳಿಲ್ಲದ ಬದುಕು ಅಸಾಧ್ಯ. ಇದನ್ನೇ ವಾಣಿಜ್ಯ ಎನ್ನಲಾಗುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಆರ್. ಸುಪ್ರಿಯಾ ಹೇಳಿದರು.

ನಗರದ ಬಾಪೂಜಿ ಬಿ ಸ್ಕೂಲ್ ಸಭಾಂಗಣದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ವಾಣಿಜ್ಯ ವಿಭಾಗದ ಇನ್‌ಸ್ಟಿಟ್ಯೂಟ್ ಆಫ್ ಹೈ ಟೆಕ್ ಎಜುಕೇಶನ್ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಾಣಿಜ್ಯ ಪ್ರದರ್ಶನದ 6 ನೇ ವಾಣಿಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಾಣಿಜ್ಯ ಕ್ಷೇತ್ರವು ವಿಶ್ವದ ಎಲ್ಲಾ ರಂಗಗಳಿಗೂ ಸಂಪರ್ಕ ಸೇತುವೆಯಂತೆ ಕೆಲಸ ಮಾಡುತ್ತಿದೆ. ಇದು ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನೂ ಸಹ ಒದಗಿಸುತ್ತದೆ. ವಿದ್ಯಾರ್ಥಿಗಳು ಭವಿಷ್ಯದ ಮಹತ್ತರ ವಾಣಿಜ್ಯೋದ್ಯಮಿಗಳಾಗಬೇಕೆಂದರು.

 ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜಿ.ಸಿ. ನೀಲಾಂಬಿಕಾ ಮಾತನಾಡಿ, ವಾಣಿಜ್ಯ ರಂಗವು ಕಾರ್ಪೊರೇಟ್‌ ಜಗತ್ತಿನ ಹೆಬ್ಬಾಗಿಲಿನಂತೆ ಇದ್ದು, ಪ್ರಸ್ತುತ ವಿದ್ಯಾರ್ಥಿಗಳು ವಾಣಿಜ್ಯ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕೇವಲ ಪದವಿ ಪಡೆದರೆ ಸಾಲದು. ಸ್ಪಷ್ಟವಾದ ಕಲ್ಪನೆ ಹಾಗೂ ಯೋಜನೆಗಳು ಭವಿಷ್ಯದ ನಿರ್ಧಾರಗಳ ಬಗ್ಗೆ ಇರಬೇಕೆಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ಹೈಟೆಕ್ ಎಜುಕೇಶನ್  ಕಾಲೇಜಿನ ಪ್ರಾಚಾರ್ಯ ಡಾ.ಬಿ. ವೀರಪ್ಪ ಮಾತನಾಡಿ, ವಾಣಿಜ್ಯ ಪದವಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಸ್ವಾಗತಾರ್ಹ ಎಂದರು.

ರಾಷ್ಟ್ರೀಯ ಆರ್ಥಿಕ ಅಭಿವೃದ್ಧಿಗೆ ವಾಣಿಜ್ಯೋದ್ಯಮ ಅಗತ್ಯ. ವಾಣಿಜ್ಯೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 450 ಕ್ಕೂ ಹೆಚ್ಚು ನೋಂದಣಿಗಳಾಗಿವೆ ಎಂದು ತಿಳಿಸಿದರು.

ಎನ್.ಸಿ. ಪ್ರಜ್ಞಾ, ಸಿ.ಕೆ. ಸ್ಫೂರ್ತಿ ಪ್ರಾರ್ಥಿಸಿದರು. ಸಂಸ್ಥೆ ನಿರ್ದೇಶಕ ಡಾ. ಹೆಚ್.ವಿ. ಸ್ವಾಮಿ ತ್ರಿಭುವಾನಂದ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಲಕ್ಷ್ಮೀ ರಜಪೂತ್, ಮೊಹಮದ್ ಆದಿಲ್ ನಿರೂಪಿಸಿದರು. ವಿ. ಸಿಂಚನಾ, ಕೆ.ಎನ್. ರಕ್ಷಾ ಅತಿಥಿಗಳನ್ನು ಪರಿಚಯಸಿದರು. ಪ್ರೊ.ಎಂ.ಎಸ್. ನಾಗರಾಜ್ ವಂದಿಸಿದರು. 

error: Content is protected !!