ಅಕ್ರಮ ಪಡಿತರ : ತಡೆಯಲು ಹೊರಟಿದ್ದ ಕೌನ್ಸಿಲರ್ ಮೇಲೆ ಹಲ್ಲೆ

ಅಕ್ರಮ ಪಡಿತರ : ತಡೆಯಲು ಹೊರಟಿದ್ದ ಕೌನ್ಸಿಲರ್ ಮೇಲೆ ಹಲ್ಲೆ

ಹರಿಹರ, ನ.25- ಅಕ್ರಮ ಪಡಿತರ ಅಕ್ಕಿ ಹಾಗೂ ರಾಗಿ ಸಾಗಣೆ ತಡೆಯಲು ಹೋಗಿದ್ದ ನಗರಸಭೆ ಬಿಜೆಪಿ ಸದಸ್ಯ ಹನುಮಂತಪ್ಪನವರ ಮೇಲೆ ಸೊಸೈಟಿ ಮಾಲೀಕ ಡಿ. ಹನುಮಂತಪ್ಪ ಮತ್ತು ಅವರ ಪತ್ನಿ ಹಲ್ಲೆ ನಡೆಸಿದ್ದಾರೆ  ಎಂದು ಆರೋಪಿಸಿ ನಗರ ಬಿಜೆಪಿ ಪಕ್ಷದ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಲಾಯಿತು.

ಈ ವೇಳೆ ಬಿಜೆಪಿ   ಗ್ರಾಮಾಂತರ ಘಟಕದ ಅಧ್ಯಕ್ಷ ಹಿಂಡಸಗಟ್ಟೆ ಲಿಂಗರಾಜ್ ಮಾತನಾಡಿ,  ಗೂಂಡಾ ವರ್ತನೆ  ತೋರಿರುವ ಸೊಸೈಟಿ  ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಮಗಳನ್ನು ಕೈಗೊಳ್ಳಬೇಕು  ಎಂದು ಆಗ್ರಹಿಸಿ ದರು.  ಮನವಿ ಸ್ವೀಕರಿಸಿದ ತಹಶೀಲ್ದಾರ್ ಗುರು ಬಸವರಾಜ್, ಈ ಬಗ್ಗೆ  ತನಿಖೆ  ನಡೆಸಿ ಮುಂದಿನ ಕ್ರಮ ಕೈಗೊಳ್ಳ ಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಆಟೋ ಹನುಮಂತಪ್ಪ, ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಸಿದ್ದಲಿಂಗಸ್ವಾಮಿ, ನಗರ ಬಿಜೆಪಿ   ಪ್ರಧಾನ ಕಾರ್ಯದರ್ಶಿ ಹೆಚ್. ಮಂಜಾನಾಯ್ಕ್, ಮುಖಂಡರಾದ ಬಾತಿ ಚಂದ್ರಶೇಖರ್, ರಾಜು ರೋಖಡೆ, ಸ್ವಾತಿ ಹನುಮಂತಪ್ಪ, ಜಡಿಯಪ್ಪ, ರಾಜು ಕಿರೋಜಿ, ಸಂತೋಷಿ ಗುಡಿಮನಿ,  ಭರತ್, ಗಣೇಶ, ಅನಿಲ್ ಸಾವಂತ್,  ಶಾಂತಕುಮಾರ, ಆದಿತ್ಯ, ಯೋಗೀಶ್, ವಿನಾಯಕ ಆರಾಧ್ಯಮಠ ಇತರರು ಹಾಜರಿದ್ದರು.

error: Content is protected !!