ಪಿ.ಜೆ.ಬಡಾವಣೆ ವಕ್ಫ್ ಆಸ್ತಿಯಲ್ಲ, ಸರ್ಕಾರದ ದಾಖಲೆಯಲ್ಲಿ ತಿದ್ದುಪಡಿ

ಪಿ.ಜೆ.ಬಡಾವಣೆ ವಕ್ಫ್ ಆಸ್ತಿಯಲ್ಲ, ಸರ್ಕಾರದ ದಾಖಲೆಯಲ್ಲಿ ತಿದ್ದುಪಡಿ

ನಾಗರಿಕರ ಹರ್ಷೋದ್ಘಾರ: ಸಚಿವ ಮಲ್ಲಿಕಾರ್ಜುನ್, ದಿನೇಶ್‌ ಶೆಟ್ಟಿಗೆ ಅಭಿನಂದನೆ

ದಾವಣಗೆರೆ, ನ.24- ನಗರದ ಪಿ.ಜೆ.ಬಡಾವಣೆ ವಕ್ಫ್ ಆಸ್ತಿಯಲ್ಲ, ಸರ್ಕಾರಿ ಖರಾಬು ಎಂದು ಪಹಣಿಯಲ್ಲಿ ತಿದ್ದುಪಡಿ ಮಾಡಿದ್ದು, ಸ್ಥಳೀಯ ನಾಗರಿಕರು ಇದಕ್ಕೆ ಕಾರಣರಾದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಅವರನ್ನು ಅಭಿನಂದಿಸಿದ್ದಾರೆ.

2008ರಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಅಂದಿನ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪಾಡಿ ಮೂಲಕ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ 2012ರಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರಿಗೆ ವರದಿ ನೀಡಿತ್ತು. ಈ ವರದಿ ಆಧಾರಿಸಿ ಸದಾನಂದ ಗೌಡ ಅವರು ರಾಜ್ಯದಲ್ಲಿ 27 ಸಾವಿರ ಎಕರೆ ಜಮೀನು ವಕ್ಫ್ ಆಸ್ತಿ ಆಗಿದ್ದು, ಅದನ್ನು ವಾಪಸ್ ಪಡೆಯಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪೂರಕವಾಗಿ ಈ ಹಿಂದಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಸಹ ಮುಸ್ಲಿಂ ಸಮಾಜದ ಮುಖಂಡರ ಸಭೆಯಲ್ಲಿ ವಕ್ಫ್ ಆಸ್ತಿ ಬಗ್ಗೆ ಗಂಭಿರವಾಗಿ ಪರಿಗಣಿಸಿ ವಾಪಾಸ್ ನೀಡಲಾಗುವುದು ಎಂದು ತಿಳಿಸಿದ್ದರು.

ಪಿ.ಜೆ.ಬಡಾವಣೆ ವಕ್ಫ್ ಆಸ್ತಿಯಲ್ಲ, ಸರ್ಕಾರದ ದಾಖಲೆಯಲ್ಲಿ ತಿದ್ದುಪಡಿ - Janathavani

ಅದರಂತೆ ಪಿ.ಜೆ.ಬಡಾವಣೆಯ ಮಹಾನಗರ ಪಾಲಿಕೆ ಆಸ್ತಿಯನ್ನು ವಕ್ಫ್ ಆಸ್ತಿಯೆಂದು ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರ ಸೂಚನೆಯಂತೆ ತಿದ್ದುಪಡಿ ಮಾಡಲಾಗಿತ್ತು. ಈ ಬಗ್ಗೆ ಪಿ.ಜೆ.ಬಡಾವಣೆಯ ನಾಗರಿಕರು ಆತಂಕ ವ್ಯಕ್ತಪಡಿಸಿ, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಅವರ ಮುಖಾಂತರ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಗಮನಕ್ಕೆ ತಂದ ನಂತರ ಸಚಿವರು ಸರ್ಕಾರದೊಂದಿಗೆ ಮಾತನಾಡಿ ತಿದ್ದುಪಡಿಗೆ ಸೂಚನೆ ನೀಡಿದರು.

ಸರ್ಕಾರ ಇಂದು ತಿದ್ದುಪಡಿ ಮಾಡಿದ್ದು, ಪಹಣಿಯಲ್ಲಿ ಸರ್ಕಾರಿ ಖರಾಬು ಜಾಗ ಎಂದು ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ಸ್ಥಳೀಯ ನಾಗರಿಕರಾದ ಮಧು ಪವಾರ್, ಸಂದೀಪ್ ಜೈನ್, ನಾಕೊಡ ಸುರೇಶ್, ವಿಜಯ್ ಜೈನ್, ಕಾಸಲ್ ಬದ್ರಿನಾಥ್, ಉತ್ತಮ್ ಜೈನ್, ನಿರಂಜನ್ ನಿಶಾನಿಮಠ, ಚೈನ್‍ರಾಜ್, ಹೆಚ್.ವಿ. ರಾಮದಾಸ್, ಪ್ರಭು ಐಗೂರು, ರಾಜುಭಂಡಾರಿ, ಶ್ರೀಕಾಂತ್ ಬಗೆರ, ಮಹೇಂದ್ರ ಕುಮಾರ್ ಅವರುಗಳು ಹರ್ಷ ವ್ಯಕ್ತಪಡಿಸಿ ಸಚಿವ ಮಲ್ಲಿಕಾರ್ಜುನ್ ಮತ್ತು ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಅವರನ್ನು ಅಭಿನಂದಿಸಿದ್ದಾರೆ.

error: Content is protected !!