ಜನತಾವಾಣಿ ಕಚೇರಿಯಲ್ಲಿ `ಎಜು ಏಷಿಯಾ’ ವಿದ್ಯಾರ್ಥಿಗಳು

ಜನತಾವಾಣಿ ಕಚೇರಿಯಲ್ಲಿ `ಎಜು ಏಷಿಯಾ’ ವಿದ್ಯಾರ್ಥಿಗಳು

ದಾವಣಗೆರೆ, ನ.15- ಪತ್ರಿಕೆಗೆ `ಜನತಾವಾಣಿ’ ಎಂದು ಹೆಸರಿಟ್ಟ ಕಾರಣವೇನು? ಹಲವಾರು ಪತ್ರಿಕೆಗಳ ನಡುವೆಯೂ `ಜನತಾವಾಣಿ’ ಹೆಚ್ಚು ಜನಪ್ರಿಯವಾಗಲು ಕಾರಣವೇನು? ಪತ್ರಿಕೆಯಲ್ಲಿ ಬರುವ ಅಷ್ಟೆಲ್ಲಾ ವರದಿಗಳನ್ನು ಹೇಗೆ ಸಂಗ್ರಹಿಸುತ್ತೀರಿ?

ನಗರದ ಎಜು ಏಷಿಯಾ ಎಂ.ಎನ್.ಎಸ್. ಕಾಂಟಿನೆಂಟಲ್ ಶಾಲಾ ವಿದ್ಯಾರ್ಥಿಗಳು  ಶುಕ್ರವಾರ `ಜನತಾವಾಣಿ’ ಕಾರ್ಯಾ ಲಯಕ್ಕೆ ಆಗಮಿಸಿ ಸಂಪಾದಕರು ಹಾಗೂ ವರದಿಗಾರರೊಂದಿಗೆ ಸಂವಾದ ನಡೆಸುತ್ತಿದ್ದಾಗ ಕೇಳಿದ ಪ್ರಶ್ನೆಗಳಿವು. 

ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಲಯಕ್ಕೆ ಬಂದಿದ್ದರು. ಆದರೆ ಪ್ರತಿ ವಿದ್ಯಾರ್ಥಿಯ ಮನದಲ್ಲೂ ಪ್ರಶ್ನೆಗಳ ಗುಚ್ಚವೇ ಇತ್ತು. ಸಂಪಾದಕರಾದ ಎಂ.ಎಸ್. ವಿಕಾಸ್ ಮಕ್ಕಳೊಂದಿಗೆ ಆತ್ಮೀಯತೆಯಿಂದಲೇ ಬೆರೆತು ಉತ್ತರಿಸಿದರು.

ಸಂಪಾದಕರಾಗಿ ಸಮಾಜದಲ್ಲಿ ಏನು ಬದಲಾವಣೆ ತರಲು  ಬಯಸುತ್ತೀರಿ? ಸರ್ಕಾರ ನಿಮ್ಮನ್ನು ಗುರುತಿಸಿ ಪ್ರಶಸ್ತಿ ನೀಡಿದೆಯೇ? ಪತ್ರಿಕೆ ಮುದ್ರಿಸುವುದು ಹೇಗೆ? ಒಂದು ಪತ್ರಿಕೆಗೆ ತಗಲುವ ವೆಚ್ಚವೆಷ್ಟು? ಎಷ್ಟು ಜನ ಕಾರ್ಯ ನಿರ್ವಹಿಸುತ್ತಿದ್ದೀರಿ?  ಸುದ್ದಿಯ ಒತ್ತಡಗಳನ್ನು ಹೇಗೆ ನಿರ್ವಹಿಸುತ್ತೀರಿ? ಹೀಗೆ ಹಲವಾರು ಪ್ರಶ್ನೆಗಳಿಗೆ ಮಕ್ಕಳು ಉತ್ತರ ಕಂಡುಕೊಂಡರು.

ಜನತಾವಾಣಿ ಕಚೇರಿಯಲ್ಲಿ `ಎಜು ಏಷಿಯಾ' ವಿದ್ಯಾರ್ಥಿಗಳು - Janathavani

ವರದಿಗಾರಿಕೆ ಹಾಗೂ ವರದಿ ಮಾಡುವಾಗಿನ ಸ್ಪಷ್ಟತೆ, ನಿಖರತೆ, ಒತ್ತಡ, ಪುಟ ವಿನ್ಯಾಸದ ಬಗ್ಗೆ,  ವೆಬ್ ಸೈಟ್ ನಿರ್ವಹಣೆ ವಿಷಯಗಳ ಕುರಿತು ವರದಿಗಾರರ ಎಸ್.ಎ. ಶ್ರೀನಿವಾಸ್, ಕೆ.ಎನ್. ಮಲ್ಲಿಕಾರ್ಜುನ್‌ ಮೂರ್ತಿ, ಮಂಜುಳಾ ಟಿ.ಎನ್., ಶೀಲಾ ವೀರಭದ್ರಪ್ಪ ವಿವರಿಸಿದರು.

ಖರ್ಚು-ವೆಚ್ಚ ನಿರ್ವಹಣೆ ಬಗ್ಗೆ ಯಶೋಧ ಅಗಡಿಮಠ ಮಾಹಿತಿ ನೀಡಿದರು. ಟಿ.ಎಂ. ಚಂದ್ರಯ್ಯ ಹಾಗೂ ಸುರೇಶ್‌ಕುಮಾರ್ ಮತ್ತೊಮ್ಮೆ ಪತ್ರಿಕೆಗಳನ್ನು ಮುದ್ರಿಸಿಯೇ ವಿದ್ಯಾರ್ಥಿಗಳಿಗೆ ತೋರಿಸಿದರು. ಫೋಟೋ ಗ್ರಾಫರ್ ರಫೀಕ್ ಅಹ್ಮದ್ ಈ ಸಂದರ್ಭದಲ್ಲಿದ್ದರು.

ಶಾಲೆಯ ಪ್ರಾಂಶುಪಾಲರಾದ ವಾಣಿ ಗುಜ್ಜರ್, ಮುಖ್ಯೋಪಾಧ್ಯಾಯರಾದ ಗಾಯತ್ರಿ ಜಿ.ಡಿ., ವಿಜ್ಞಾನ ಶಿಕ್ಷಕರಾದ ಸಮೀರ್ ಅಹ್ಮದ್, ಕನ್ನಡ ಶಿಕ್ಷಕಿ ಯಲ್ಲಮ್ಮ, ಜಿ.ಬಿ., ಮಂಜುಳಾ ಜಿ.ಎಸ್., ಮಜರ್ ಅಲಿ ಈ ಸಂದರ್ಭದಲ್ಲಿದ್ದರು.

error: Content is protected !!