ಹರಿಹರದಲ್ಲಿ ನಾಳೆ ನಿರ್ಮಲ ತುಂಗಭದ್ರಾ ಜನ ಜಾಗೃತಿ ಅಭಿಯಾನದ ಪಾದಯಾತ್ರೆ

ಹರಿಹರದಲ್ಲಿ ನಾಳೆ ನಿರ್ಮಲ ತುಂಗಭದ್ರಾ  ಜನ ಜಾಗೃತಿ ಅಭಿಯಾನದ ಪಾದಯಾತ್ರೆ

ಹರಿಹರ, ನ.13- ನಾಡಿದ್ದು ದಿನಾಂಕ 15 ರಂದು ನಗರದಲ್ಲಿ ನಡೆಯುವ ನಿರ್ಮಲ ತುಂಗಭದ್ರಾ ಜನ ಜಾಗೃತಿ ಅಭಿಯಾನದ ಪಾದಯಾತ್ರೆಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಅಭಿಯಾನದ ತಾಲ್ಲೂಕು ಸಂಚಾಲಕ ವೀರೇಶ್ ಅಜ್ಜಣ್ಣನವರ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 6 ರಿಂದ ಶೃಂಗೇರಿಯಿಂದ ಆರಂಭವಾದ ನಿರ್ಮಲ ತುಂಗಭದ್ರಾ ಅಭಿಯಾನವು ಶಿವಮೊಗ್ಗ, ಭದ್ರಾವತಿ, ಹೊನ್ನಾಳಿ ತಾಲ್ಲೂಕಿನಲ್ಲಿ ಪಾದಯಾತ್ರೆ 15 ರವರೆಗೆ ಹರಿಹರ ತಾಲ್ಲೂಕಿನಲ್ಲಿ ಸಂಚರಿಸಲಿದೆ. ಅಭಿಯಾನದ ಅಂಗವಾಗಿ ನ.15 ರಬೆಳಗ್ಗೆ 10ಕ್ಕೆ ನಗರದ ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ರಾಘವೇಂದ್ರ ಮಠದ ಸಮೀಪದ ನದಿಯ ದಡದಲ್ಲಿರುವ ತುಂಗಭದ್ರಾರತಿ ಕಾರಿಡಾರ್‍ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. 

ಇದೇ ವೇಳೆ ಗಾಂಧಿ ವೃತ್ತದಲ್ಲಿ ಕೆಲ ಸಮಯ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಲಾಗುವುದು. ತುಂಗಭದ್ರಾರತಿ ಕಾರಿಡಾರ್‍ನಲ್ಲಿ ನಡೆಯುವ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಹರ ಪೀಠದ ವಚನಾನಂದ ಶ್ರೀ, ಕನಕ ಗುರು ಪೀಠದ ನಿರಂಜನಾನಂದಪುರಿ ಶ್ರೀಗಳು ವಹಿಸಲಿದ್ದಾರೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಿ.ಪಿ ಹರೀಶ್, ಮಾಜಿ ಶಾಸಕರಾದ ಎಸ್ ರಾಮಪ್ಪ, ಹೆಚ್.ಎಸ್ ಶಿವಶಂಕರ್, ಎಸ್ಪಿ ಉಮಾ ಪ್ರಶಾಂತ್, ಮುಖಂಡರಾದ ಎನ್.ಹೆಚ್ ನಂದಿಗಾವಿ ಶ್ರೀನಿವಾಸ್, ಚಂದ್ರಶೇಖರ್ ಪೂಜಾರ್, ಡಾ.ಶಶಿಕುಮಾರ್ ಮೆಹರ್ವಾಡೆ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಕಾರ್ಯಕಾರಿ ಸಮಿತಿ ಸದಸ್ಯ ವಿವೇಕ್ ತ್ಯಾಗಿ, ದಕ್ಷಿಣ ಭಾರತ ಸಂಯೋಜಕ ಸಿ.ಪಿ ಮಾಧವನ್  ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಕಾರ್ಯಕಾರಿ ಸಮಿತಿ ಸದಸ್ಯ ವಿವೇಕ್ ತ್ಯಾಗಿ, ದಕ್ಷಿಣ ಭಾರತ ಸಂಯೋಜಕ ಸಿ.ಪಿ ಮಾಧವನ್, ಶಾಂತ ಕುಮಾರಿ, ಚಂದ್ರಶೇಖರ್ ಪೂಜಾರ್, ಕಂಚಿ ಕೇರಿ ಕರಿಬಸಪ್ಪ ಸೇರಿದಂತೆ ಇತರರಿದ್ದರು.

error: Content is protected !!