ಶ್ರೀ ಜಗದ್ಗುರು ಜಯ ವಿಭವ ವಿದ್ಯಾಸಂಸ್ಥೆಯ ಸಂಸ್ಥಾಪಕ, ಶ್ರೀ ವೀರಭದ್ರಪ್ಪ ಎಂ ಚಿಗಟೇರಿ 1916-2024
ನಹೀ ಜ್ಞಾನೇನ ಸದೃಶಂ, ಪವಿತ್ರಮಿಹ ವಿದ್ಯತೇ
`ಜ್ಞಾನಕ್ಕಿಂತ ಮಿಗಿಲಾದದು ಮತ್ತು ಪವಿತ್ರವಾದದ್ದು ಇನ್ನೊಂದಿಲ್ಲ . ಜ್ಞಾನವೊಂದು ಸಾರ್ವತ್ರಿಕ ಶಕ್ತಿ’ಯಾಗಿದೆ. ಶಿಕ್ಷಣದ ಪ್ರಮುಖ ಗುರಿ ಜ್ಞಾನಾರ್ಜನೆಯಾಗಿದೆ, ಜ್ಞಾನದಿಂದ ವ್ಯಕ್ತಿಯ ಬದುಕಿನ ಎಲ್ಲಾ ಕ್ಷೇತ್ರಗಳನ್ನು ಬೆಳೆಸಬಹುದಾಗಿದೆ ಹಾಗೂ ಬಳಸಬಹುದಾಗಿದೆ.
ಶ್ರೀ ಜಗದ್ಗುರು ಜಯ ವಿಭವ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಶ್ರೀ ವೀರಭದ್ರಪ್ಪ ಎಂ. ಚಿಗಟೇರಿ ಅವರ 108ನೇ ಜನ್ಮ ದಿನೋತ್ಸವದ ಅಂಗವಾಗಿ, ಇಂದು ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಸಮಸ್ತ ಶಾಲೆಗಳ ಸಂಸ್ಥಾಪ ಕರಿಗೊಂದು ನಮನ ಸಲ್ಲಿಸುತ್ತಾ, ಸಂಸ್ಥೆಯ ವೆಬ್‌ಸೈಟ್ ಪ್ರಾರಂಭಗೊಳ್ಳುತ್ತಿರುವುದು ಹರ್ಷದಾಯಕವಾಗಿದೆ.
ನಮಗೆಲ್ಲಾ ತಿಳಿದಂತೆ ಈ ಜಾಲತಾಣ ಎಂಬುವ ಪರಿಕಲ್ಪನೆ ಹುಟ್ಟಿಕೊಂಡಿದ್ದು ಒಂದು ರೋಚಕ ಸಂಗತಿಯಾಗಿದೆ. 1989 ರಲ್ಲಿ `ಟೀಮ್ ಬರ್ನರ್ ಸ್ಲೀ’ ಎಂಬ ಆಂಗ್ಲ ವಿಜ್ಞಾನಿ ಸಿ.ಇ.ಆರ್.ಎನ್. ಎಂಬ ಯುರೋಪಿಯನ್ ಅಣು ಸಂಶೋಧನೆಯ ಸಂಘಟನೆಯಲ್ಲಿ ಕಂಡು ಹಿಡಿದರು. ಈ ಜಾಲತಾಣದಿಂದ, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂದೇಶ ರವಾನೆಯಾಗುವುದು ಬಹಳ ಸುಲಭವಾಗಿದೆ.
ಮಕ್ಕಳ ದಿನಾಚರಣೆಯಂದು ಶ್ರೀಯುತರು ಜನಿಸಿದ್ದು ವಿಶೇಷವಾಗಿದೆ ಅಂದು 1962ರಲ್ಲಿ ಬೆಳಗಿಸಿದ ದಿವ್ಯ ಜ್ಞಾನದ ಜ್ಯೋತಿ ಇಂದಿಗೂ ಶಿಕ್ಷಣದ ದೀವಿಗೆಯ ರೂಪದಲ್ಲಿ ಪ್ರತಿ ಮನೆಯಲ್ಲೂ ಹೆಮ್ಮೆಯಿಂದ ಪ್ರಕಾಶಿಸಿರುವುದು ಸತ್ಯ ಸಂಗತಿ. ಸಂಸ್ಥಾಪಕರ 108ನೇ ಜನ್ಮದಿನೋತ್ಸವ ಕೇವಲ ಅವರಿಗಷ್ಟೇ, ಅವರ ಕುಟುಂಬಕಷ್ಟೇ ಸೀಮಿತವಾಗದೆ ಅವರು ಸಮಾಜಕ್ಕೆ, ರಾಷ್ಟ್ರಕ್ಕೆ ನೀಡಿದ ಬಹುಮುಖ್ಯ ಕೊಡುಗೆಯಾಗಿದೆ. ರಾಷ್ಟ್ರ ನಿರ್ಮಾಣಕ್ಕೆ ಹಿಂದಿನ ಮಕ್ಕಳನ್ನು ಸತ್‌ಪ್ರಜೆಗಳನ್ನಾಗಿ ರೂಪಿಸುವಲ್ಲಿ ಇವರ ಪಾತ್ರ ಹಿರಿದಾಗಿದೆ. ಈ 108 ಎಂಬ ಸಂಖ್ಯೆ ಹಿಂದೂ ಧರ್ಮದಲ್ಲಿ ತುಂಬಾ ವಿಶೇಷವಾಗಿದೆ. ವೇದಗಳ ಪ್ರಕಾರ 108 ಸಂಖ್ಯೆ ಇಡೀ ಬ್ರಹ್ಮಾಂಡವನ್ನು ಪ್ರತಿನಿಧಿಸುತ್ತದೆ ಮತ್ತು ಬ್ರಹ್ಮಾಂಡದ ಅಸ್ತಿತ್ವವನ್ನು ಕೂಡ ವಿವರಿಸುತ್ತದೆ. ಇದನ್ನು ಶಿವನ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಅಂತೆಯೇ ಶ್ರೀ ವೀರಭದ್ರಪ್ಪನವರ ಸ್ಮರಣಾರ್ಥ 108 ಎಂಬ ಸಂಖ್ಯೆಯ ಮಹತ್ವ ತಿಳಿದು ಅವರ ಜನ್ಮದಿನದ ಜೊತೆಗೆ ಜಾಲತಾಣ (world wide web) ಬಿಡುಗಡೆಗೊಳ್ಳುತ್ತಿರುವುದು ಹರ್ಷದಾಯಕವಾಗಿದೆ. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದಂತಹ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ತಮ್ಮ ಪ್ರತಿಭೆಯ ಮುಖಾಂತರ ಬೆಳಗುತ್ತಿದ್ದಾರೆ. ಅಂದಿನ ಶಾಲಾ ದಿನಗಳಲ್ಲಿ ಶಾಲೆಯ ದಿನಚರಿಯಲ್ಲಿ ವಚನ ಗಾಯನ, ಯೋಗಾಸನ ತರಗತಿಗಳು ಶ್ರೀಯುತರ ದೂರ ದೃಷ್ಟಿಗೆ ಸಾಕ್ಷಿಯಾಗಿವೆ. ನಮ್ಮ ಸನಾತನ ಧರ್ಮದ ಪ್ರತೀಕವಾದ ನಮ್ಮ 2 ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಎಂಬ ಪರೀಕ್ಷೆ ಕಟ್ಟಿಸುತ್ತಿದ್ದದು ಇದರ ಮುಖೇನ ವಿದ್ಯಾರ್ಥಿಗಳಲ್ಲಿ ಸನಾತನ ಧರ್ಮದ ಸಂಸ್ಕೃತಿ ಜೊತೆಗೆ ಮಹಾಕಾವ್ಯಗಳ ಪರಿಚಯವಿರಲಿ ಎಂಬ ಅವರ ಪೂರ್ವಲೋಚನೆ ಅನುಕರಿಸುವಂತಹದು. ಅಷ್ಟೇ ಪ್ರಾಮುಖ್ಯತೆಯನ್ನು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೂ ನೀಡುತ್ತಿದ್ದರು.
ಶ್ರೀಯುತರ ವ್ಯಕ್ತಿತ್ವದ ಸರಳ ಸಜ್ಜನಿಕೆಯಿಂದ ಕೂಡಿದ್ದು, ಲಿಂಗಾಯತ ಧರ್ಮದ ಪ್ರತೀಕ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಂಡಿದ್ದರು.
ಮನೆಯಲ್ಲೂ ಸಹ ನಿತ್ಯದಾಸೋಹ ಆಧ್ಯಾತ್ಮ ಚಿಂತನೆ ಶರಣರ ಚಿಂತನೆ, ದಾನ, ಧರ್ಮವಾದಿಗಳನ್ನು ಬಿಡದೆ ನೆರವೇರಿಸುತ್ತಿದ್ದರು. ಶ್ರೀಯುತರು ಪೋಷಕರಾದ ಶ್ರೀ ಮುರಿಗೆಪ್ಪ ಚಿಗಟೇರಿ ಮತ್ತು ಗುರು ಶಾಂತಮ್ಮನವರ ಧರ್ಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಶಾಲೆಗಳ ಮುಖಾಂತರ ವಿದ್ಯಾರ್ಥಿಗಳಲ್ಲಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಮಾತ್ರವಲ್ಲದೇ, ಅಖಿಲ ಭಾರತ ವೀರಶೈವ ಶಿವಸಿಂಪಿ ಸಮಾಜದ ಪ್ರಥಮ ಅಧಿವೇಶನಕ್ಕೂ ಕಾರಣಕರ್ತರಾಗಿದ್ದಾರೆ. ಶಿವಸಿಂಪಿ ಸಮಾಜದ ಸಂಸ್ಥಾಪಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇಂದು, 108ನೇ ಜನ್ಮ ದಿನಕ್ಕೆ ವಿಶೇಷ ಕೊಡುಗೆ – ಅಕ್ಕಮಹಾದೇವಿ ಬಾಲಕಿಯರ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಕು. ಜೀವಿತ ಕನ್ನಡ ಮಾಧ್ಯಮದಲ್ಲಿ 625ಕ್ಕೆ 608 ಅಂಕಗಳನ್ನು ಪಡೆದು, ಶ್ರೀಯುತರಿಗೆ ವಿಶೇಷ ಗೌರವ ಅರ್ಪಿಸಿದ್ದಾರೆ. ದಾವಣಗೆರೆಯ ಉತ್ತರ ವಲಯದ ಕನ್ನಡ ಮಾಧ್ಯಮ ಶಾಲೆಯ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಎಂ. ಸುಮತಿ ಎಂಬುವರು ಕಳೆದ ವರ್ಷ ಇನ್ಫೋಸಿಸ್ ಸಂಸ್ಥೆಯ ವತಿಯಿಂದ ಶಾಲೆಗೆ 50 ಕಂಪ್ಯೂಟರ್‌ಗಳನ್ನು ಕೊಡಿಸಿರು ವುದು ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಸಮಾಜಮುಖಿ ಜವಾಬ್ದಾರಿಯುತ ಸಂಸ್ಕಾರಕ್ಕೆ ಕೈಗನ್ನಡಿಯಾಗಿದೆ. ಶಾಲೆಯಲ್ಲಿ ವಿಶೇಷ ಆಧುನಿಕ ತಂತ್ರಜ್ಞಾನದ ಸೌಲಭ್ಯ ಗಳು ಅತಿ ಹೆಚ್ಚು ವಿದ್ಯಾರ್ಥಿಗಳಿಗೆ ಲಭ್ಯವಾಗಿ, ಜಾಲತಾಣ ಬಿಡುಗಡೆಗೊಳ್ಳುತ್ತಿರುವುದು ಪ್ರಶಂಸನೀಯವಾಗಿದೆ.
ಇಂದು www.sjjes.ac.in ಐಡಿಯೊಂದಿಗೆ ಲೋಕ ಸಮರ್ಪಣೆಯಾಗಲಿದೆ. ಅವರ ಮೊಮ್ಮಕ್ಕಳಾದ ಮುರುಗೇಂದ್ರ ವಿ. ಚಿಗಟೇರಿ ಹಾಗೂ ಮನೋಹರ ಎಸ್. ಚಿಗಟೇರಿ ಅವರುಗಳು ಅವಿರತ ಪರಿಶ್ರಮ ದೊಂದಿಗೆ ಶಾಲಾ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಅಂದು ಅಜ್ಜನ ನೆರಳಾಗಿ ಬೆಳೆದವರು, ಇಂದು ಶಾಲೆಯ ಅಭಿವೃದ್ಧಿಗೆ ಪ್ರತಿಬಿಂಬವಾಗಿ, ಬೋಧಕ, ಬೋಧಕೇತರ ವರ್ಗಗಳಿಗೆ ಸ್ಫೂರ್ತಿಯಾಗಿದ್ದಾರೆ.
– ಮಂಜುಳಾ ಬಿ ಸಂಗಮೇಶ್,
ಎ.ಜಿ.ಹೆಚ್.ಎಸ್. ವಿದ್ಯಾರ್ಥಿ