ದಾವಣಗೆರೆ, ನ.13- ವಕ್ಫ್ ನೆನಪೋಲೆಗಳು ವಾಪಾಸ್, ಮ್ಯುಟೇಶನ್‌ಗೆ ರಾಜ್ಯ ಸರ್ಕಾರ ತಡೆ ನೀಡಿದ್ದು, ಸಾರ್ವಜನಿಕರು ಮತ್ತು ರೈತರು ಯಾವುದೇ ರೀತಿ ಯಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮ್ಯುಟೇಷನ್ ಮಾಡಲು ಯಾವುದೇ ಕಚೇರಿ ಅಥವಾ ಪ್ರಾಧಿಕಾರದಿಂದ ನೀಡಲಾದ ನಿರ್ದೇಶನಗಳನ್ನು ವಾಪಾಸ್ ಪಡೆಯಲಾಗಿದೆ. ಇದರಿಂದ ಯಾವುದೇ ಪ್ರಕ್ರಿಯೆಗಳು ನಡೆಯುವುದಿಲ್ಲ ಎಂದು ಹೇಳಿದರು.
ದಾವಣಗೆರೆ ಪಿ.ಜೆ. ಬಡಾವಣೆ ವಕ್ಫ್ ಬೋರ್ಡ್ ಗೆ ಸೇರಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ವರದಿಯಂತೆ 1940 ರಲ್ಲಿ ಪಿ.ಜೆ. ಬಡಾವಣೆ ನಿರ್ಮಾಣವಾಗಿದೆ. ಅಂದಿನಿಂದ ಇಂದಿನವರೆಗೂ ಯಾವುದೇ ಗೊಂದಲವಿರಲಿಲ್ಲ. ಆದರೆ ಈ ಗೊಂದಲ ಯಾಕೆ ಬಂತು ಗೊತ್ತಾಗುತ್ತಿಲ್ಲ. ಇದಕ್ಕೆ ಬಿಜೆಪಿಯವರೇ ಕಾರಣ ಎಂದು ದೂರಿದರು.
ಸಂವಿಧಾನ ಬದಲಾಯಿಸಲು ಹೊರಟಿ ರುವ ಬಿಜೆಪಿ ಆಟದ ಭಾಗವಾಗಿ ರುವ ವಕ್ಫ್‌ನಿಂದ ರಾಜ್ಯದಲ್ಲಿ ಗೊಂದಲ ಮೂಡಿಸುತ್ತಿರುವ ಬಿಜೆ ಪಿಗರು ತಮ್ಮ ಅವಧಿಯಲ್ಲಿ ರೈತರಿಗೆ ನೋಟೀಸ್ ನೀಡಿದ್ದರು ಎಂಬು ದನ್ನು ಮರೆಯಬಾರದು ಎಂದರು.
ಈಗಾಗಲೇ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಅಧಿಕಾರಿಗಳಿಗೆ ಸಹ ಸೂಚನೆ ನೀಡಿದ್ದು, ಯಾವುದೇ ಗೊಂದಲಕ್ಕೂ ಆಸ್ಪದ ನೀಡದೇ ಸರ್ಕಾರದ ನಿಯವನ್ನು ಪಾಲಿಸುವಂತೆ ತಿಳಿಸಿದ್ದಾರೆಂದು ಹೇಳಿದರು.
ಬಿಜೆಪಿಯವರು ದಾಖಲೆ ಇಲ್ಲದೇ ರಾಜ ಕೀಯ ಮಾಡಲು ಹೊರಟಿದ್ದಾರೆ. ದಾವಣಗೆರೆ ಯಲ್ಲಿ ರೈತರ ಹಾಗೂ ಸಾರ್ವಜನಿಕರ ಆಸ್ತಿ ಕಬ ಳಿಸಲು ಬಿಡುವುದಿಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ದಿನೇಶ್ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಎ. ನಾಗರಾಜ್, ಮಂಜುಳಮ್ಮ, ರಾಜು ಭಂಡಾರಿ, ಸಾವಂತ್ ಜೈನ್, ಶ್ರೀಕಾಂತ್ ಬಗಾರೆ, ಯುವರಾಜ್ ಉಪಸ್ಥಿತರಿದ್ದರು.