ಸಹಕಾರ ಸಂಘಗಳನ್ನು ಸುಸ್ಥಿತಿಯಲ್ಲಿ ಇರಿಸುವ ಕೆಲಸವಾಗಬೇಕು

ಸಹಕಾರ ಸಂಘಗಳನ್ನು ಸುಸ್ಥಿತಿಯಲ್ಲಿ ಇರಿಸುವ ಕೆಲಸವಾಗಬೇಕು

ನೂತನ ವಾಣಿಜ್ಯ ಸಂಕೀರ್ಣ ಉದ್ಘಾಟನೆಯಲ್ಲಿ ಎಸ್.ಎ. ರವೀಂದ್ರನಾಥ್

ದಾವಣಗೆರೆ, ನ. 6- ಅಧಿಕಾರವಧಿಯಲ್ಲಿ ನಿಷ್ಠೆಯಿಂದ ಉತ್ತಮ ಕೆಲಸ ಮಾಡಬೇಕು. ಆಗ ಸಹಕಾರ ಸಂಘಗಳು ಉದ್ಧಾರ ಆಗಲಿವೆ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು.

ಶಿರಮಗೊಂಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಎಸ್.ಎ. ರವೀಂ ದ್ರನಾಥ್ ನಗರದಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಸಂಘಗಳನ್ನು ಸುಸ್ಥಿತಿಯಲ್ಲಿ ಇರಿಸುವ ಕೆಲಸ ಮಾಡಬೇಕು. ಶಿರಮಗೊಂಡನಹಳ್ಳಿ ಕೃಷಿ ಪತ್ತಿನ ಸಂಘವು ಜಿಲ್ಲೆಯಲ್ಲೇ ಉತ್ತಮ ಸಂಘ ಎಂಬ ಹೆಸರು ಪಡೆಯಲಿ ಎಂದು ಹಾರೈಸಿದರು. 

ನಬಾರ್ಡ್ ಜಿಲ್ಲಾ ವ್ಯವಸ್ಥಾಪಕರಾದ ರಶ್ಮಿ ರೇಖಾ ಮಾತನಾಡಿ, ಸಹಕಾರ ಸಂಘಗಳನ್ನು ಗಣಕೀಕರಣಕ್ಕೆ ಒಳಪಡಿಸಲಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಜೊತೆಗೆ ಇತರೆ ಸಹಕಾರ ಸಂಘಗಳು ಆನ್‌ಲೈನ್ ಮೂಲ ಕವೇ ವ್ಯವಹಾರ ನಡೆಸಬೇಕಾಗಲಿದೆ ಎಂದರು.

ಸಹಕಾರ ಕ್ಷೇತ್ರದಲ್ಲಿ ಅನೇಕ ರೀತಿಯ ಸವಲತ್ತುಗಳಿವೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರು ಇದರ ಲಾಭ ಪಡೆಯಬೇಕು. ಅಲ್ಲದೇ ಹೊಸ ಮಾರ್ಪಾ ಡುಗಳ ಕುರಿತಂತೆಯೂ ಸಲಹೆಗಳನ್ನು ನೀಡಬಹುದು ಎಂದು ಹೇಳಿದರು.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಮಾತನಾಡಿ, ವಾಣಿಜ್ಯ ಸಂಕೀರ್ಣದ 7 ಮಳಿಗೆಗಳು  ಸುಂದರವಾಗಿ ನಿರ್ಮಾಣಗೊಂಡಿವೆ. ಇವನ್ನು ಸುಸ್ಥಿತಿಯಲ್ಲಿ ಇರಿಸಬೇಕು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ಶೇಖರಪ್ಪ ಮಾತನಾಡಿ, ಮಳಿಗೆಗಳ ಆದಾಯೋತ್ಪನ್ನ ದಿಂದಲೂ ಪತ್ತಿನ ಸಂಘಗಳನ್ನು ಸುಸ್ಥಿತಿಯಲ್ಲಿ ಇರಿಸಬಹುದು ಎಂದರಲ್ಲದೇ, ರೈತರೂ ಸಕಾಲಕ್ಕೆ ಮರುಪಾವತಿಸಿ ಬಡ್ಡಿ ರಹಿತ ಸಾಲದ ಸೌಲಭ್ಯ ಪಡೆಯಬಹುದು.

ಅನುತ್ಪಾದಿತ ಸಾಲವನ್ನು ನಿಗದಿತ ಅವಧಿಯಲ್ಲಿ ಶೇ. 3ರ ಬಡ್ಡಿ ದರದಲ್ಲಿ ಕಟ್ಟಬೇಕು. ಇಲ್ಲದಿದ್ದರೆ ಸುಸ್ತಿ ಬಡ್ಡಿ ಸಮಸ್ಯೆ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.

ಮುಖಂಡ ವೀರೇಂದ್ರ ಪಾಟೀಲ್ ಮಾತನಾಡಿ, ವಾಣಿಜ್ಯ ಮಳಿಗೆಗಳನ್ನು ಕಾನೂನು ಚೌಕಟ್ಟಿನಡಿ ಪ್ರಸ್ತುತ ದರಕ್ಕೆ ಬಾಡಿಗೆ ರೂಪದಲ್ಲಿ ವಿತರಿಸಬೇಕು. ಸ್ನೇಹಿತರು, ಸಂಬಂಧಿಕರಿಗೆ ಮಳಿಗೆ ನೀಡುವ ಮುಲಾಜು ಬೇಡ ಎಂದು ಸಲಹೆ ನೀಡಿದರು.

ರೈತ ಎ.ಬಿ. ಕರಿಬಸಪ್ಪ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲಿ ಈ ಹಿಂದೆ ಪಡೆದ ಅಡಿಕೆ ಸಂಬಂಧಿತ ಸಾಲ ಮರುಪಾವತಿಸಿದಾಗ ನವೀಕರಣ ಮಾಡಿ ಮರುಸಾಲ ನೀಡಲು ಗಮನ ಹರಿಸಬೇಕು ಎಂದು ಹೇಳಿದರು.

ಚಿಗಟೇರಿ ಆಸ್ಪತ್ರೆಯ ಜಿಲ್ಲಾ ರಕ್ಷಾ ಸಮಿತಿ ಸದಸ್ಯ ಎಸ್.ಎಂ. ರುದ್ರೇಶ್ ಮಾತನಾಡಿ, ಪತ್ತಿನ ಸಂಘದ ಬೆಳವಣಿಗೆಯಲ್ಲಿ ಮಾಜಿ ಸಚಿವ ರವೀಂದ್ರನಾಥ್ ಸಹಕಾರ ನೀಡಿದ್ದಾರೆ. ಪಕ್ಷ ಭೇದ ಇಲ್ಲದಿದ್ದಲ್ಲಿ ಅಭಿವೃದ್ಧಿ ಕಾಣಬಹುದು ಎಂದು ತಿಳಿಸಿದರು.

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಸುಶೀಲಮ್ಮ ರಾಯಪ್ಳ ರಾಜಪ್ಪ, ಶಿರಮಗೊಂಡನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಲಲಿತಮ್ಮ ದೇವೇಂದ್ರಪ್ಪ, ಉಪಾಧ್ಯಕ್ಷೆ ವಿನುತಾ ಸುರೇಶ್‌ಬಾಬು, ಗೌಡ್ರು ಜಯಮ್ಮ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಜಯಪ್ಪ, ಉಪಾಧ್ಯಕ್ಷ ಡಿ. ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಮಲ್ಲೇಶಪ್ಪ, ಉದ್ಯಮಿ ಆನಂದ, ಮುಖಂಡರಾದ ಎ.ಎಂ. ಮಂಜುನಾಥ್, ಹೆಚ್.ಜಿ. ಗುಡ್ಡೇಶಪ್ಪ, ಜಿ.ಎನ್. ಸ್ವಾಮಿ, ಶಿವಮೂರ್ತಪ್ಪ ಇತರರಿದ್ದರು.

error: Content is protected !!