ಆರೆಸ್ಸೆಸ್‌ನಿಂದ ಸದೃಢ ಸಮಾಜದ ಸಂಕಲ್ಪ

ಆರೆಸ್ಸೆಸ್‌ನಿಂದ ಸದೃಢ ಸಮಾಜದ ಸಂಕಲ್ಪ

ಹರಿಹರದಲ್ಲಿ ನಡೆದ ಆರ್.ಎಸ್.ಎಸ್ ವಾರ್ಷಿಕ  ಪಥ ಸಂಚಲನದಲ್ಲಿ ಸತೀಶ್

ಹರಿಹರ, ನ.3- ಆರ್‍ಎಸ್‍ಎಸ್ ಸ್ಥಾಪನೆಯಾಗಿ ಶತಮಾನ ಕಾಣುತ್ತಿರುವ ಈ ಸಂದರ್ಭದಲ್ಲಿ ಕುಟುಂಬ ನಿರ್ಮಾಣ, ಸಾಮರಸ್ಯ, ಪರಿಸರ, ಸ್ವದೇಶಿ ಭಾವ, ನಾಗರೀಕ ಶಿಷ್ಟಾಚಾರವೆಂಬ ಪಂಚ ಪರಿವರ್ತನೆ ಮೂಲಕ ಸಮಾಜವನ್ನು ಸದೃಢಗೊಳಿಸುವ ಸಂಕಲ್ಪ ಹೊಂದಲಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‍ಎಸ್‍ಎಸ್) ದಕ್ಷಿಣ ಪ್ರಾಂತ್ಯ ಶಾರೀರಿಕ ಪ್ರಮುಖ ಸತೀಶ್ ಹೇಳಿದರು.

ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ಆರ್‍ಎಸ್‍ಎಸ್‍ನ ವಾರ್ಷಿಕ ಪಥಸಂಚಲನದ ನಿಮಿತ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಗತ್ತಿಗೆ ವ್ಯಕ್ತಿತ್ವ ನಿರ್ಮಾಣದ ಶಕ್ತಿಯ ಕಲ್ಪನೆ ನೀಡಿದ ಖ್ಯಾತಿ ಆರ್‍ಎಸ್‍ಎಸ್‍ಗೆ ಸಲ್ಲುತ್ತದೆ. ಜಗತ್ತಿನಲ್ಲಿ ಅಶಾಂತಿ, ಹಿಂಸೆಯ ವಾತಾವರಣ ನಿರ್ಮಾಣವಾದರೆ ಶಾಂತಿಯನ್ನು ಮೂಡಿಸಲು ಭಾರತದತ್ತ ನೋಡುವ ಸ್ಥಿತಿ ಇದೆ. ಈ ಸಂಘಟನೆಯನ್ನು ಸಂಕುಚಿತ ಭಾವನೆಯಿಂದ ನೋಡುವವರು ಇಂದು ದೇಶದ್ರೋಹಿಗಳೆನಿಸಿಕೊಂಡಿದ್ದಾರೆಂದರು.

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಮಂಜುನಾಥ ಮಾತನಾಡಿ, ಬಾಹ್ಯ ಮತ್ತು ಆಂತರಿಕ ದುಷ್ಟ ಶಕ್ತಿಗಳು ಭಾರತವನ್ನು ಕುಗ್ಗಿಸಲು ಪ್ರಯತ್ನ ಮಾಡುತ್ತಿವೆ. ಆ ದುಷ್ಟ ಶಕ್ತಿಗಳನ್ನು ಮೆಟ್ಟಿ ನಿಲ್ಲುವ ಅಗತ್ಯವಿದೆ. ದಲಿತರು, ಶೋಷಿತರನ್ನು ಒಟ್ಟಿಗೆ ಕರೆದೊಯ್ಯುವ ಅಗತ್ಯವಿದೆ, ರಾಷ್ಟ್ರ ಮೊದಲು ಎಂಬ ಭಾವನೆ ಎಲ್ಲರಲ್ಲೂ ಬೆಳೆಯಬೇಕಿದೆ ಎಂದರು.

ನಗರದ ಪ್ರಮುಖ ರಸ್ತೆಗಳಲ್ಲಿ ಸ್ವಯಂ ಸೇವಕರು ಪಥಸಂಚಲನ ನಡೆಸಿದರು. ಶಾಸಕ ಬಿ.ಪಿ.ಹರೀಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ, ನಗರಸಭಾ ಸದಸ್ಯ ರಾದ ಆಟೋ ಹನುಮಂತಪ್ಪ, ಎ.ಬಿ.ಎಂ. ವಿಜಯಕುಮಾರ್, ಬಿಜೆಪಿ ನಗರ ಘಟಕ ಅಧ್ಯಕ್ಷ ಅಜಿತ್ ಸಾವಂತ್, ದೂಡಾ ಮಾಜಿ ಸದಸ್ಯ ರಾಜು ರೋಖಡೆ,ಡಾ.ಆರ್.ಆರ್.ಖಮಿತ್ಕರ್, ಚಿದಂಬರ ಶಾಸ್ತ್ರಿ, ಶಂಕರ್ ನಾಡಿಗೇರ್, ಬಾತಿ ಚಂದ್ರಶೇಖರ್, ಧರಣೇಂದ್ರ, ಹರೀಶ್, ಶಿವಕುಮಾರ್ ಇದ್ದರು.

error: Content is protected !!