ದಾವಣಗೆರೆ,ಅ.31- ದಾವಣಗೆರೆ ಜಿಲ್ಲಾಡಳಿತದ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ನಾಡು – ನುಡಿಗಾಗಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಸಾಧಕರಿಗೆ ಪ್ರತೀ ವರ್ಷ ಕೊಡ ಮಾಡುವ ಪುರಸ್ಕಾರಕ್ಕೆ ಈ ಬಾರಿ 33 ಮಹನೀಯರನ್ನು ಆಯ್ಕೆ ಮಾಡಲಾಗಿದೆ ಎಂದು ಡಿಸಿ ಡಾ. ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ಹೊರಡಿಸಿರುವ ಆದೇಶದಲ್ಲಿ, ನಾಳೆ ದಿನಾಂಕ 1ರ ಶುಕ್ರವಾರ ಬೆಳಿಗ್ಗೆ 9.30ಕ್ಕೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಏರ್ಪಾಡಾಗಿರುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಎಲ್ಲಾ 33 ಸಾಧಕರನ್ನು ಸನ್ಮಾನಿಸಿ, ಗೌರವಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಹಿರಿಯ ಸಾಹಿತಿ ಸಂತೇಬೆನ್ನೂರಿನ ಕೆ.ಸಿದ್ದಲಿಂಗಪ್ಪ, ಹಿರಿಯ ಜಾನಪದ ಕಲಾವಿದರಾದ ಚಿನ್ನಸಮುದ್ರದ ಶ್ರೀಮತಿ ಪೀರಿಬಾಯಿ ಉಮ್ಮಾನಾಯ್ಕ, ಹಿರಿಯ ಸಂಗೀತ ಕಲಾವಿದ ಎಂ. ಬಸಣ್ಣ, ಹಿರಿಯ ಪತ್ರಕರ್ತರುಗಳಾದ ಜನತಾವಾಣಿಯ ಓ.ಎನ್. ಸಿದ್ದಯ್ಯ, ಎಂ.ಬಿ. ನವೀನ್, ಹಿರಿಯ ಮುದ್ರಣಕಾರರಾದ ಬಸವೇಶ್ವರ ಮುದ್ರಣದ ಎ.ಎಂ. ಪ್ರಕಾಶ್, ಹಿರಿಯ ನ್ಯಾಯವಾದಿ ಎಲ್.ಹೆಚ್. ಅರುಣ್ ಕುಮಾರ್, ಹಿರಿಯ ರಂಗಭೂಮಿ ಕಲಾವಿದ ತೋರಣಘಟ್ಟದ ಬಡಪ್ಪ ಅವರುಗಳೂ ಸೇರಿದಂತೆ, 33 ಸಾಧಕರು ಜಿಲ್ಲಾಡಳಿತದ ರಾಜ್ಯೋತ್ಸವದ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಶಿಲ್ಪಕಲೆ : ಟಿ. ಶ್ರೀನಿವಾಸ್, ವಿ.ಎನ್. ಮೇಘಾಚಾರಿ, ಕೆ.ಆರ್. ಮೌನೇಶ್ವರ ಶಿಲ್ಪಿ (ಎಲ್ಲರೂ ದಾವಣಗೆರೆ).
ಸಂಗೀತ : ಟಿ. ಬಸವರಾಜು (ಜಗಳೂರು), ಎ.ಎಂ. ಶಶಿಕಿರಣ್ (ಚನ್ನಗಿರಿ), ಎಂ. ಬಸಣ್ಣ (ದಾವಣಗೆರೆ).
ಜಾನಪದ : ಶ್ರೀಮತಿ ಪೀರಿಬಾಯಿ ಉಮ್ಮಾನಾಯ್ಕ್ (ಚಿನ್ನಸಮುದ್ರ), ಹೆಚ್.ಪಿ. ನಾಗೇಂದ್ರಪ್ಪ (ಹರಿಹರ), ಎಸ್.ಕೆ. ವೀರೇಶ್ ಕುಮಾರ್ (ಹರಿಹರ), ಶ್ರೀಮತಿ ಪಿ. ಮೀನಾಕ್ಷಿ (ದಾವಣಗೆರೆ).
ಸಮಾಜ ಸೇವೆ : ಎ.ಜೆ. ರವಿಕುಮಾರ್, ಎಲ್.ಹೆಚ್. ಅರುಣ್ ಕುಮಾರ್.
ಪತ್ರಿಕೋದ್ಯಮ : ಓ.ಎನ್. ಸಿದ್ದಯ್ಯ (ಜನತಾವಾಣಿ), ಎಂ.ಬಿ. ನವೀನ್ (ವಿಜಯವಾಣಿ), ಕೆ.ಎಸ್. ಚನ್ನಬಸಪ್ಪ (ನಗರವಾಣಿ), ಹೆಚ್.ಟಿ. ಪರಶುರಾಮ್ (ಪಬ್ಲಿಕ್ ಟಿವಿ), ಹೆಚ್.ಎಂ. ಸದಾನಂದ (ಕನ್ನಡಪ್ರಭ, ಕುಂಬಳೂರು), ಎಂ.ಎಸ್.ಮಂಜುನಾಥ (ಪತ್ರಿಕಾ ವಿತರಕ), ಎ.ಎಂ. ಪ್ರಕಾಶ್ (ಮುದ್ರಣ ಕ್ಷೇತ್ರ).
ಸಂಕೀರ್ಣ : ಎಂ. ಮನು, ಬಿ. ತಿಮ್ಮನಗೌಡ (ದಾವಣಗೆರೆ).
ಛಾಯಾಗ್ರಹಣ : ಶ್ರೀನಾಥ್ ಪಿ. ಅಗಡಿ.
ಕ್ರೀಡೆ : ಎಸ್.ಪಿ. ಲಾವಣ್ಯ ಶ್ರೀಧರ್ (ಯೋಗಾಸನ, ದಾವಣಗೆರೆ).
ರಂಗಭೂಮಿ : ಬಡಪ್ಪ (ತೋರಣಘಟ್ಟ – ಜಗಳೂರು), ವಿನಾಯಕ ನಾಕೋಡ (ದಾವಣಗೆರೆ), ಎಸ್.ವಿ. ವಿಶ್ವನಾಥ (ದೊಣ್ಣೆಹಳ್ಳಿ – ಜಗಳೂರು), ಕೆ.ಎಸ್. ಕೊಟ್ರೇಶ್ (ದಾವಣಗೆರೆ).
ಕನ್ನಡಪರ ಹೋರಾಟ : ಸಂತೋಷ್ ದೊಡ್ಮನಿ, ಶ್ರೀಮತಿ ಬಿ.ಎಸ್. ಶುಭಮಂಗಳ, ನಾಗರಾಜ್ ಜಮ್ನಳ್ಳಿ (ದಾವಣಗೆರೆ), ಎಲ್.ಜಿ.ಮಧು ಕುಮಾರ್ (ಚನ್ನಗಿರಿ).
ಸಾಹಿತ್ಯ : ಕೆ. ಸಿದ್ದಲಿಂಗಪ್ಪ (ಚನ್ನಗಿರಿ).
ಕೃಷಿ : ಕೆ.ಟಿ. ಚಂದ್ರಶೇಖರಪ್ಪ (ಕುಕ್ಕುವಾಡ – ದಾವಣಗೆರೆ).