ಪ್ರಶಸ್ತಿಗಳಿಂದ ಹೋರಾಟಕ್ಕೆ ಮತ್ತಷ್ಟು ಹುರುಪು

ಪ್ರಶಸ್ತಿಗಳಿಂದ ಹೋರಾಟಕ್ಕೆ ಮತ್ತಷ್ಟು ಹುರುಪು

ಹರಿಹರ,ಜ. 20 – ಹರಿಹರ ತಾಲ್ಲೂಕು ರಾಜನಹಳ್ಳಿ ವಿಶ್ವಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 32 ನೇ ವರ್ಷದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಹಿನ್ನೆಲೆ ರಾಜನಹಳ್ಳಿಯ ಶ್ರೀ ಬೀರಲಿಂಗೇಶ್ವರ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದ್ ರಾಜ್ ಅವರಿಗೆ ವಿಶ್ವ ಭಾರತಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಹೋರಾಟ ಗುರುತಿಸಿ ಪ್ರಶಸ್ತಿ ನೀಡಿದ್ದು ಖುಷಿ ನೀಡಿದೆ. ಜೊತೆಗೆ ಜವಾಬ್ದಾರಿ ಹೆಚ್ಚಿಸಿದೆ. ಹಲವು ವರ್ಷಗಳಿಂದ ಜನರಿಗಾಗಿ ಹೋರಾಟ ಮಾಡುತ್ತಾ ಬೆಳೆದು ಬಂದಿರುವವರಿಗೆ ಇಂತಹ ಪ್ರಶಸ್ತಿಗಳು ಮತ್ತಷ್ಟು ಹುರುಪು ನೀಡುತ್ತವೆ. ಈ ಒಂದು ಶಾಲೆಯನ್ನು ಮೂವತ್ತು ವರ್ಷಗಳಿಂದ ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವ ವಿಶ್ವಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಹೆಚ್. ಮಂಜುನಾಥ್ ಅವರ ಸಾಧನೆ ನಿಜಕ್ಕೂ ಅವಿಸ್ಮರಣೀಯ ಎಂದರು.

ಈ ವೇಳೆ ಪತ್ರಕರ್ತ ಬಿ.ಬಿ. ಮಲ್ಲೇಶ್, ಕಲಾವಿದ ರಂಗನಾಥ ಜಿಗಳಿ ಅವರಿಗೂ ವಿಶ್ವ ಭಾರತಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶ್ವಭಾರತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಹೆಚ್. ಮಂಜುನಾಥ್, ಮಾಜಿ ಶಾಸಕ ಬಿ.ಪಿ. ಹರೀಶ್,  ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಎಎಪಿ ಪಕ್ಷದ ಮಲ್ಲಿನಾಥ್, ರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಲಂಕೇಶ್, ಉಪಾಧ್ಯಕ್ಷೆ ಹೇಮಾವತಿ ಪರಶುರಾಮಪ್ಪ,  ಆರ್. ರಾಮಕೃಷ್ಣ, ಕೃಷ್ಣಪ್ಪ ಸೇರಿದಂತೆ, ಗ್ರಾಮಸ್ಥರು, ಮತ್ತಿತರರಿದ್ದರು.

error: Content is protected !!