ದಾವಣಗೆರೆ, ಜ. 20- ನಗರದ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಶ್ರೀ ಅಂಬಾಭವಾನಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 2 ಲಕ್ಷ ರೂ.ಗಳ ಡಿ.ಡಿ.ಯನ್ನು ಹಿರಿಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ವಿ. ನಾಗನಾಳ್ ಅವರು ಸಮಾಜದ ಅಧ್ಯಕ್ಷ ಮಲ್ಲರಸಾ ಕಾಟ್ವೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿದರು.
ವಿಜಯಕುಮಾರ್ ಮಾತನಾಡಿ, ಧರ್ಮಸ್ಥಳ ಶ್ರೀಕ್ಷೇತ್ರವು ಚತುರ್ದಾನಗಳಿಗೆ ಪ್ರಸಿದ್ಧವಾಗಿದೆ. ಜನ ಮಂಗಳ ಕಾರ್ಯಕ್ರಮ, ನಿರ್ಗತಿಕರ ಮಾಸಾಶನ, ಮಾತೃಶ್ರೀ ಅಮ್ಮನವರ ವಾತ್ಸಲ್ಯ ಕಾರ್ಯಕ್ರಮ ಇತ್ಯಾದಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಸಮಾಜದ ನಿಕಟಪೂರ್ವ ಅಧ್ಯಕ್ಷ ರಮೇಶ್ ಕಾಟ್ವೆ ಅವರು ದೇವ ಸ್ಥಾನ ನಿರ್ಮಾಣಕ್ಕೆ ಶ್ರಮಿಸುತ್ತಿರುವವರಿಗೆ ಅಭಿನಂದಿಸಿದರು.
ತಾಲ್ಲೂಕಿನ ಯೋಜನಾಧಿಕಾರಿ ಬಿ. ಶ್ರೀನಿವಾಸ್, ವಲಯ ಮೇಲ್ವಿಚಾರಕರಾದ ಭಾಸ್ಕರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಗಾಯತ್ರಿ ಹಾಗೂ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಎಸ್.ಎಸ್.ಕೆ. ಸಮಾಜದ ಮಹಿಳಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಶುಭಾಂಜಲಿ ಆರ್. ಕಠಾರೆ, ತರುಣ ಮಂಡಳಿ ಅಧ್ಯಕ್ಷ ಪ್ರವೀಣ್ ಕಾಟ್ವೆ, ಕಾರ್ಯದರ್ಶಿ ಮಹೇಶ್ ಸೋಳಂಕಿ ಉಪಸ್ಥಿತರಿದ್ದರು. ರಾಜು ಬದ್ದಿ ವಂದಿಸಿದರು. ಮಂಜುನಾಥ ಹಬೀಬ್ ನಿರೂಪಿಸಿದರು.