ಇಂದಿನಿಂದ ಮೂರು ದಿನಗಳ ಕಾಲ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ಕಟ್ಟಡ ಕಟ್ಟುವ ಸಾಮಗ್ರಿ, ಒಳಾಂಗಣ ಅಲಂಕಾರದ ವಸ್ತುಗಳ ಪ್ರದರ್ಶನ ಹಾಗೂ ಅವಶ್ಯ ಮಾಹಿತಿ ನೀಡುವ `ಬಿಲ್ಡ್ ಎಕ್ಸ್ಪೋ’ ಆಯೋಜಿಸಲಾಗಿದೆ. ಸಾರ್ವಜನಿಕರು ತಮ್ಮ ಕನಸಿನ ಮನೆ ಕಟ್ಟಲು ಉಪಯೋಗ ಮಾಡಿಕೊಳ್ಳುವಂತೆ ವೀರೇಶ ಮಕರಿ ಮನವಿ ಮಾಡಿದ್ದಾರೆ
ಇಂದು ಬೆಳಿಗ್ಗೆ ಶಾಸಕ ಪ್ರಕಾಶ ಕೋಳಿವಾಡ ಪ್ರದರ್ಶನ ಉದ್ಘಾಟಿ ಸಲಿದ್ದು, ಪೌರಾಯುಕ್ತ ಪಕ್ಕೀರಪ್ಪ ಇಂಗಳಗಿ, ನಗರ ಯೋಜನಾ ಪ್ರಾಧಿಕಾರದ ಕಾರ್ಯದರ್ಶಿ ಬಿ.ಆರ್. ರವಿಕಿರಣ ಭಾಗವಹಿಸಲಿದ್ದಾರೆ. ಸಂಘದ ಅಧ್ಯಕ್ಷ ವೀರೇಶ ಮಕರಿ ಅಧ್ಯಕ್ಷತೆ ವಹಿಸುವರು.