ದಾವಣಗೆರೆ, ಅ.24- ಉಚಿತ ಹೃದಯ ಆರೋಗ್ಯ ತಪಾಸಣೆ ಶಿಬಿರ, ಭತ್ತ ಬೆಳೆಯ ಕ್ಷೇತ್ರೋತ್ಸವ ಮತ್ತು ರೈತರಿಗೆ ಗೊಬ್ಬರ ಹಾಗೂ ಪ್ರಥಮ ಚಿಕಿತ್ಸೆ ಬಾಕ್ಸ್ ವಿತರಣೆ ಕಾರ್ಯಕ್ರಮವು ಹದಡಿ ಗ್ರಾಮದ ಕನಕ ವಿವಿಧೋದ್ದೇಶಗಳ ಸಹಕಾರಿ ಸಂಘ ಬ್ಯಾಂಕ್ ಆವರಣದಲ್ಲಿ ನಾಡಿದ್ದು ದಿನಾಂಕ 26ರ ಶನಿವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ.
ದಾವಣಗೆರೆ ಲಯನ್ಸ್ ಕ್ಲಬ್ ಹಾಗೂ ಹದಡಿಯ ಕನಕ ವಿವಿಧೋದ್ದೇಶಗಳ ಸಹಕಾರಿ ಸಂಘ ಮತ್ತು ಎಸ್.ಎಸ್. ನಾರಾಯಣ ಹೆಲ್ತ್ ಸೆಂಟರ್ (ದಾವಣಗೆೆರೆ) ಇವರುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳವಯ್ಯ ವಹಿಸುವರು. ಉದ್ಘಾಟನೆಯನ್ನು ಕನಕ ವಿವಿದೋದ್ದೇಶಗಳ ಸಂಘದ ಅಧ್ಯಕ್ಷ ಎ.ಹೆಚ್. ನಾಗರಾಜ್ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಇಂದ್ರಮ್ಮ ಎಂ.ಎನ್. ದಳವಾಯಿ, ಎಸ್‌ಐ ಶ್ರೀ ಶೈಲ ಪಟ್ಟಣಶೆಟ್ಟಿ, ಆರ್.ಜಿ. ಶ್ರೀನಿವಾಸಮೂರ್ತಿ, ಬೆಳ್ಳೂಡಿ ಶಿವಕುಮಾರ್, ಎಂ.ಎಸ್. ಉದಯ್‌ಕುಮಾರ್, ಹೆಚ್.ಸಿ. ಹನುಮಂತಪ್ಪ ಇವರುಗಳು ಆಗಮಿಸುವರು.