ಸಕ್ಕರೆಯ ನಾಡು, ಅಕ್ಕರೆಯ ಬೀಡು ಮಂಡ್ಯದಲ್ಲಿ ನಡೆಯಲಿರುವ 87 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭುವನೇಶ್ವರಿ ಕನ್ನಡ ರಥ ಯಾತ್ರೆಯು ರಾಜ್ಯಾದ್ಯಂತ ಸಂಚರಿಸುತ್ತಿದೆ.
ರಥಯಾತ್ರೆಯು ಚನ್ನಗಿರಿ ತಾಲ್ಲೂಕಿನಲ್ಲಿ ಇಂದು ಸಂಚರಿಸಲಿದ್ದು, ಮರಡಿ ಗ್ರಾಮದಿಂದ ಪ್ರಾರಂಭವಾಗಿ ಸಂತೇಬೆನ್ನೂರು – ದೇವರಹಳ್ಳಿ – ಗರಗ ಕ್ರಾಸ್ – ಚನ್ನಗಿರಿ ಪಟ್ಟಣ – ದೋಣಿಹಳ್ಳಿ – ನಲ್ಲೂರು – ಸೂಳೆಕೆರೆ – ಬಸವಾಪಟ್ಟಣ – ದಾಗಿನಕಟ್ಟೆ ಗ್ರಾಮದ ಮೂಲಕ ಹೊನ್ನಾಳಿ ತಾಲ್ಲೂಕನ್ನು ತಲುಪುವುದು ಎಂದು ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವಾಪಟ್ಟಣದ ಎಲ್.ಜಿ. ಮಧುಕುಮಾರ್ ತಿಳಿಸಿದ್ದಾರೆ.