ದಾವಣಗೆರೆ, ಅ. 24 – ಕೇಂದ್ರ ಸರ್ಕಾರವು ಶಿಕ್ಷಣ ಸಚಿವಾಲಯಕ್ಕಾಗಿ ಸಲಹಾ ಸಮಿತಿಯನ್ನು ರಚಿಸಿದ್ದು, ಈ ಸಮಿತಿಗೆ ಸದಸ್ಯರಾಗಿ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ನೇಮಕಗೊಂಡಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ ಜಯಂತ್ ಚೌಧರಿ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ರಾಜ್ಯ ಸಚಿವ ಡಾ.ಸುಕಾಂತ ಮಜುಂದಾರ್ ಅವರುಗಳು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಡಾ.ಪ್ರಭಾ ಅವರು ಆರೋಗ್ಯ ಸಮಿತಿ ಜೊತೆಯಲ್ಲಿ ಶಿಕ್ಷಣ ಸಮಿತಿಗೂ ಸದಸ್ಯರಾಗಿದ್ದಾರೆ.