ರಾಣೇಬೆನ್ನೂರು, ಅ. 24- ಕಳೆದ ವಾರ ಪ್ರಕಟವಾದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲ ಯದ ಕಲಾ ಮತ್ತು ವಾಣಿಜ್ಯ ಪರೀಕ್ಷೆಯಲ್ಲಿ ನಗರದ ಬಿಎಜೆಎಸ್‍ಎಸ್ ಮಹಿಳಾ ಮಹಾವಿದ್ಯಾಲಯಕ್ಕೆ ಶೇ.94.53 ಫಲಿತಾಂಶ ಬಂದಿದೆ.
ಕಲಾ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ ಒಟ್ಟು 63 ವಿದ್ಯಾರ್ಥಿನಿಯರಲ್ಲಿ 40 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್‍ನಲ್ಲಿ ಉತ್ತಿರ್ಣರಾಗಿದ್ದಾರೆ. ಕವಿತಾ ಡಿ.ಕತ್ತಿ ಶೇ.92.9 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಹಾಗೂ ಕು.ವೀಣಾ ಡಿ.ಜಿ. (ಶೇ.90.8 ) ದ್ವಿತೀಯ ಹಾಗೂ ಸುಧಾ ಅಗಸಿಬಾಗಿಲ (ಶೇ.90.7) ತೃತೀಯ ಸ್ಥಾನ ಪಡೆದಿದ್ದಾರೆ
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 30 ವಿದ್ಯಾರ್ಥಿನಿಯರಲ್ಲಿ 29 ವಿದ್ಯಾರ್ಥಿನಿಯರು ಡಿಸ್ಟಿಂಕ್ಷ ನ್‍ನಲ್ಲಿ ಉತ್ತಿರ್ಣರಾಗಿದ್ದಾರೆ. ದೀಪಾ ಬಗನಕಟ್ಟಿ ಶೇ.93.1 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ. ಗೌರಮ್ಮ ಕಿಟ್ಟದ (ಶೇ. 88.4) ದ್ವಿತೀಯ ಹಾಗೂ ಲತಾ ಮಠದ (ಶೇ.87.5) ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿನಿಯರ ಈ ಸಾಧನೆಗೆ ವಿಧಾನಸಭೆ ಉಪಸಭಾಧ್ಯಕ್ಷರೂ ಆದ ಕಾಲೇಜಿನ ಚೇರ್ಮನ್ ರುದ್ರಪ್ಪ ಎಂ. ಲಮಾಣಿ, ಆಡಳಿತಾಧಿಕಾರಿ ಡಾ.ಆರ್.ಎಂ.ಕುಬೇರಪ್ಪ ಅಭಿನಂದಿಸಿದ್ದಾರೆ.