ಭವಿಷ್ಯದ ದಿನಗಳು ಬಂಗಾರ

ಭವಿಷ್ಯದ ದಿನಗಳು ಬಂಗಾರ

ತುಪ್ಪದಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ತರಳಬಾಳು ಶ್ರೀ 

ಜಗಳೂರು, ಅ.22- ಬರದ ನಾಡಿಗೆ  ದೈವ ಕೃಪೆ ಮತ್ತು ಮಾನವ ಪ್ರಯತ್ನದಿಂದ ಜಗಳೂರು, ಭರಮ ಸಾಗರ ಅವಳಿ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ಹರಿಯುತ್ತಿದ್ದು, ಭವಿಷ್ಯದ ದಿನಗಳು ಬಂಗಾರ ವಾಗಲಿವೆ ಎಂದು ತರಳಬಾಳು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು. 

ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ ಇಂದು ಬಾಗಿನ ಅರ್ಪಿಸಿ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಜಗಳೂರು ಕ್ಷೇತ್ರದ 57 ಕೆರೆಗಳು, ಭರಮಸಾಗರದ ವ್ಯಾಪ್ತಿಯ ಕೆರೆಗಳು ನದಿಯ ರೀತಿಯಲ್ಲಿ ತುಂಬಿ ಹರಿಯುತ್ತಿವೆ. ಮೊಬೆಲ್ ನೆಟ್ ವರ್ಕ್ ತರ ನೀರನ ನೆಟ್ ವರ್ಕ್ ಇದೆ. ಶಾಂತಿವನ ಕೋಡಿ ಬಿದ್ದರೆ, ಭರಮಸಾಗರ ಕೆರೆ, ಭರಮಸಾಗರ ಕೆರೆ ತುಂಬಿದರೆ, ತುಪ್ಪದಹಳ್ಳಿಕೆರೆ, ತುಪ್ಪದಹಳ್ಳಿ ಕೆರೆ ತುಂಬಿದ ನಂತರ ಜಗಳೂರು, ಹರಪನಹಳ್ಳಿ ತಾಲ್ಲೂಕಿನ ಮಾರ್ಗದಿಂದ ಟಿ.ಬಿ. ಡ್ಯಾಂಗೆ ನೀರು ಹರಿದು ಹೋಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ದಾವಣಗೆರೆ ತಾಲ್ಲೂಕಿನ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹೊಸ ಪೈಪ್‌ಲೈನ್ ಯೋಜನೆಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಕೊಡಲು ಸೂಚಿಸಿದ್ದಾರೆ. ತಕ್ಷಣವೇ ಪೂರ್ಣವಾಗಿ ಹಾಳವಾಗಿರುವ ಹಲವು ಪೈಪ್ ಗಳನ್ನು ತೆರುವುಗೊಳಿಸಿ  ತುರ್ತಾಗಿ ಹೊಸಪೈಪ್ ಗಳನ್ನು ಹಾಕಿ ನೀರು ಹರಿಸಲು ತಿಳಿಸಲಾಗಿದೆ ಎಂದರು.  

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಜಗಳೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆಆಡಳಿತ ಮಾಡಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಸರಕಾರಗಳು, ಕ್ಷೇತ್ರದ ಮೂವರು ಶಾಸಕರು ಕೆಲಸ ಮಾಡಿದರೆ. ಸಿರಿಗೆರೆ ಶ್ರೀ ಒಬ್ಬರೇ ನೇತೃತ್ವ ವಹಿಸಿದ್ದ ಫಲವಾಗಿ  57 ಕೆರೆಗಳಿಗೆ ತುಂಗೆ ಭದ್ರೆಯಿಂದ ನೀರು ಬಂದಿದ್ದು, ರೈತರಾದ ನಾವುಗಳು ಸದ್ಬಳೆಕೆ ಮಾಡಿಕೊಂಡು ಬದುಕು ಬಂಗಾರ ಮಾಡಿಕೊಳ್ಳಬೇಕು ಎಂದರು.

ನೀರಾವರಿ ಇಲಾಖೆಯ ನಿವೃತ್ತ ಎಂ.ಡಿ. ಮಲ್ಲಿಕಾರ್ಜುನ್ ಗುಂಗಿ ಮಾತನಾಡಿ,  ನಾನು ಮೂರು ಬಾರಿ ತುಪ್ಪದಹಳ್ಳಿಕೆರೆಗೆ ಶ್ರೀಗಳ ಆದೇಶದಂತೆ ಬಂದು ಕೆಲಸ ನಿರ್ವಹಿಸಿದ ತೃಪ್ತಿ ನನಗೆ ತಂದಿದೆ. ಎರಡು ವರ್ಷದ ಹಿಂದೆ ಕೆರೆ ತುಂಬಿಸಿದ್ದು, ಈಗ ಸಹ ಕೆರೆ ಕೋಡಿ ಬಿದ್ದಿದ್ದು ರೈತರಂತೆ ನನಗೆ ಸಂತಸ ತಂದಿದೆ ಎಂದರು.

ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ ಮತ್ತು ಎಚ್.ಪಿ.ರಾಜೇಶ್ ಮಾತನಾಡಿದರು. ಮುಖಂಡರಾದ ವಕೀಲ ಕೆ.ಎಂ.  ಬಸವರಾಜಪ್ಪ, ಶಿವಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ  ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು ಉಪಸ್ಥಿರಿದ್ದರು.

error: Content is protected !!