ಹರಿಹರ ತಾಲ್ಲೂಕಿನ ಮಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿದ ಪ್ರಭಾ ಮಲ್ಲಿಕಾರ್ಜುನ್
ಹರಿಹರ, ಅ.17- ವಿಪತ್ತು ನಿರ್ವಹಣಾ ಸಮ ಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮುತುವರ್ಜಿ, ಶಿಸ್ತು ಬದ್ಧತೆ ಯಿಂದ ಕರ್ತವ್ಯ ನಿರ್ವಹಣೆ ಮಾಡದೇ ಹೋದರೆ, ಜನರ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಳ್ಳುತ್ತವೆ. ಆದ್ದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಷ್ಠೆಯಿಂದ ಕೆಲಸ ಮಾಡುವಂತೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ಇಲ್ಲಿನ ಬೆಂಕಿನಗರ ಬಡಾವಣೆಯ ಮಳೆ ಹಾನಿ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸಿ, ಪತ್ರಕರ್ತರೊಂದಿಗೆ ಅವರು ಮಾತ ನಾಡಿದರು. ಅಧಿಕಾರಿ ಮತ್ತು ಜನಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದಾಗ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬೆಂಕಿನಗರ ಮತ್ತು ಕಾಳಿದಾಸ ಬಡಾ ವಣೆಯ ಮನೆಗಳಿಗೆ ನೀರು ನುಗ್ಗುವ ಸಮಸ್ಯೆ ಬಗ್ಗೆ ತಹಶಿಲ್ದಾರ್ ಮತ್ತು ಪೌರಾಯುಕ್ತರಿಂದ ಮಾಹಿತಿ ಸಂಗ್ರಹಿಸಲಾಗಿದ್ದು, ಇಲ್ಲಿನ ಜನರ ಬಹುದಿನಗಳ ಬೇಡಿಕೆಯಾದ ರಾಜ ಕಾಲುವೆ ಮತ್ತು ಚಾನಲ್ ಗೆ ತಡೆಗೋಡೆ ನಿರ್ಮಿಸಲು ಕೂಡಲೇ ಜಿಲ್ಲಾಧಿಕಾರಿ ಬಳಿ ಚರ್ಚಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದರು.
ಜೈ ಭೀಮನಗರದಲ್ಲಿ ಮನೆಯ ಗೋಡೆ ಬಿದ್ದು, ಆಯೇಶಾ ಎಂಬ ಮಗು ತೀವ್ರ ಗಾಯಗೊಂಡು ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಸ್ಪತ್ರೆಯ ವೈದ್ಯರ ಬಳಿ ಚರ್ಚೆ ಮಾಡಿದ್ದು, ಮಗುವಿನ ರಕ್ಷಣೆಗೆ ಸೂಕ್ತ ನೆರವು ನೀಡಲಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಸದಸ್ಯರಾದ ಬಿ. ಅಲ್ತಾಫ್, ಶಾಯಿನಾಬಾನು ದಾದಾಪೀರ್, ಬಾಬುಲಾಲ್ ಮಾತನಾಡಿ, ಬೆಂಕಿ ನಗರದಲ್ಲಿ ಹರಿಯುವ ಚಾನಲ್ ನಲ್ಲಿ ಹೂಳು ತುಂಬಿಕೊಂಡು ನೀರು ಮನೆಗಳಿಗೆ ನುಗ್ಗಿದೆ, ತಡೆ ಗೋಡೆ ನಿರ್ಮಿಸಿಕೊಡು ವಂತೆ ಮತ್ತು ರಾಜ ಕಾಲುವೆ ನಿರ್ಮಾಣ ಮಾಡುವಂತೆ ಸಂಸದರಿಗೆ ಮನವಿ ಮಾಡಿದರು.
ತಹಶೀಲ್ದಾರ್ ಗುರುಬಸವರಾಜ್ ಮಾತನಾಡಿ, ತಡೆಗೋಡೆ ನಿರ್ಮಾಣಕ್ಕೆ, ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ಮಾಡಿ ತಡೆಗೋಡೆ ನಿರ್ಮಿಸುವು ದಾಗಿ ಭರವಸೆ ನೀಡಿದರು.
ಮನೆಗಳಿಗೆ ನೀರು ನುಗ್ಗಿರುವ ನಿರಾಶ್ರಿ ತರ ಕುಟುಂಬದ ಸದಸ್ಯರಿಗೆ ಸರ್ಕಾರದ ಮಾನದಂಡಗಳ ಪ್ರಕಾರ ಈಗಾಗಲೇ ಕಾಳಜಿ ಕೇಂದ್ರವನ್ನು ತೆರೆದು ಊಟ ಉಪಚಾರ ಮಾಡಿಸಲಾಗಿದೆ ಎಂದರು.
ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ಮಾತನಾಡಿ, ನಗರಸಭೆಯಲ್ಲಿ ಅಧಿಕಾರಿಗಳ, ಸಿಬ್ಬಂದಿಗಳ ಕೊರತೆ ಕಾರಣ ಕೆಲಸಗಳಾಗುತ್ತಿಲ್ಲ. ಹಿಂದಿನ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ ಎಂದು ಸಂಸದರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಿಎಸ್ಐ ಶ್ರೀಪತಿ ಗನ್ನಿ, ಮುಖಂಡರಾದ ದಾದಾಪೀರ್ ಭಾನುವಳ್ಳಿ, ಎಲ್.ಬಿ. ಹನುಮಂತಪ್ಪ, ಸಚಿನ್ ಕೊಂಡಜ್ಜಿ, ನಾರಾಯಣ, ತಾಲ್ಲೂಕು ಆಹಾರ ನಿರೀಕಕ ನಸ್ರುಲ್, ವಿ.ಎ. ಗಳಾದ ಹೇಮಂತ್ ಕುಮಾರ್, ಸಮೀರ್, ಪೊಲೀಸ್ ರವಿಕುಮಾರ್, ಮಂಜುನಾಥ್ ಇತರರು ಹಾಜರಿದ್ದರು.