ಪುನೀತ್ ರಾಜ್‌ಕುಮಾರ್ ಕಪ್ ಚೆಸ್‌ಗೆ ಸಚಿವರು ಹಾಗೂ ಸಂಸದರಿಂದ ಚಾಲನೆ

ಪುನೀತ್ ರಾಜ್‌ಕುಮಾರ್ ಕಪ್ ಚೆಸ್‌ಗೆ  ಸಚಿವರು ಹಾಗೂ ಸಂಸದರಿಂದ ಚಾಲನೆ

ದಾವಣಗೆರೆ, ಅ.4- ಚೆಸ್‌ ಕ್ಲಬ್ ಆಯೋಜಿಸಿರುವ `ಪುನೀತ್ ರಾಜ್‌ ಕುಮಾರ್ ಕಪ್’ ಪಂದ್ಯಾವಳಿಯನ್ನು ಎಂ.ಸಿ.ಸಿ. `ಬಿ’ ಬ್ಲಾಕ್‌ನ ಸಚಿವರ ನಿವಾಸದ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್.ಮಲ್ಲಿಕಾರ್ಜುನ್ ಹಾಗೂ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಉದ್ಘಾಟನೆ ಮಾಡಿದರು. 

ಈ ಸಂದರ್ಭದಲ್ಲಿ ಮೇಯರ್‌ ಚಮನ್‌ಸಾಬ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ,  ಲತಿಕ ದಿನೇಶ್‌ ಶೆಟ್ಟಿ, ಯುವರಾಜ್, ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಎ. ಬಿ. ರಹೀಮ್ ಸಾಬ್,
ಸವಿತಾ ಹುಲ್ಮನೆ ಗಣೇಶ್, ಅನಿತಾ ಬಾಯಿ ಮಾಲತೇಶ, ಕಾಂಗ್ರೆಸ್ ಮುಖಂಡರಾದ ಗಣೇಶ್ ಹುಲ್ಮನೆ, ಕಾರ್ಯಕರ್ತರು, ಕ್ರಿಡಾಪಟುಗಳು ಮತ್ತಿತರರು ಉಪಸ್ಥಿತರಿದ್ದರು.

error: Content is protected !!