ಗಲಭೆ ಪ್ರಕರಣದಲ್ಲಿ ಬಂಧಿತ ಆರೋಪಿ ಹಿಂದೂ ಕಾರ್ಯಕರ್ತ ಸತೀಶ್ ಪೂಜಾರಿ ಮನೆಗೆ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಕುಟುಂಬದವರಿಗೆ ಸ್ಥೈರ್ಯ ತುಂಬಿದರು.
ದಾವಣಗೆರೆ, ಸೆ. 29 – ರಾಜ್ಯದ ಹಿರಿಯ ರಾಜಕಾರಣಿಗಳು ಪರಸ್ಪರ ಹೊಂದಾಣಿಕೆಯಲ್ಲಿ ದ್ದಾರೆ. ಅವರ ಬೆನ್ನು ಇವರು ಇವರ ಬೆನ್ನು ಅವರು ಕೆರೆಯುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪರಸ್ಪರ ಸಹಕಾರ ನೀಡುವ ಇಂತಹ ಹಿರಿಯ ರಾಜಕಾರಣಿಗಳ ಹಣೇಬರಹವನ್ನು ರಾಜ್ಯದ ಜನ ನೋಡಿದ್ದಾರೆ ಎಂದೂ ಹೇಳಿದರು.
2013ರ ವಿಧಾನಸಭಾ ಚುನಾವಣೆ ಸಂದ ರ್ಭದಲ್ಲಿ ಕಾಂಗ್ರೆಸ್ ಪಕ್ಷದವರು ಪೇಸಿಎಂ, ಪಿಎಸ್ಐ, ಬಿಟ್ಕಾಯಿನ್, 40 ಪರ್ಸೆಂಟ್ ಕಮೀಷನ್ ಎಂದೆಲ್ಲಾ ತಮಟೆ ಹೊಡೆದರು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗುತ್ತಾ ಬಂದರೂ ಈ ಆರೋಪಗಳ ಬಗ್ಗೆ ಒಂದು ಸಾಕ್ಷಿಯನ್ನೂ ಹೊರ ತರಲು ಸಾಧ್ಯವಾಗಿಲ್ಲ ಎಂದರು.
ಈಗ ಮುಡಾ ಹಗರಣ ಬೆಳಕಿಗೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯವರ ಮೇಲೆ ಪ್ರತಿ ಕೇಸು ದಾಖಲಿಸುವ ಹಾಗೂ ಜೈಲಿಗೆ ಕಳಿಸುವ ಮಾತನಾಡುತ್ತಿದ್ದಾರೆ ಎಂದು ಸಿಂಹ ತರಾಟೆಗೆ ತೆಗೆದುಕೊಂಡರು.
ಸಿದ್ದರಾಮಯ್ಯ ಅವರ ಕುರ್ಚಿ ಹೋಗುವ ಪರಿಸ್ಥಿತಿಯಾಗಿ, ಕುತ್ತಿಗೆಗೆ ಬರುವ ಪ್ರಸಂಗ ಬಂದಾಗ ಕೇಸು ಹಾಕುವ ಪೊಳ್ಳು ಧಮಕಿ ಹಾಕುತ್ತಿದ್ದಾರೆ. ಎಷ್ಟು ಬೇಕಾದರೂ ಎಫ್.ಐ.ಆರ್. ದಾಖಲಿಸಿ, ತಪ್ಪು ಮಾಡಿದವರನ್ನು ಜೈಲಿಗೆ ಕಳಿಸಿ ಎಂದು ಸವಾಲು ಹಾಕಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು 14 ನಿವೇಶನಗಳನ್ನು ಮರಳಿಸಲು ಸಲಹೆ ನೀಡಿದ್ದೆ. ಅವರು ಹಾಗೆ ಮಾಡಿದ್ದರೆ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಹೋಗುತ್ತಿತ್ತು. ಸೈಟು ಪಡೆದ ಬೇರೆಯವರೆಲ್ಲ ಸಿಕ್ಕಿ ಬೀಳುತ್ತಿದ್ದರು ಎಂದೂ ಸಿಂಹ ಹೇಳಿದರು.
ಆದರೆ, ಸಿದ್ದರಾಮಯ್ಯ ಹಾಗೆ ಮಾಡದೇ ತಮ್ಮ ನಿವೇಶನಗಳಿಗೆ 62 ಕೋಟಿ ರೂ. ಕೊಡಬೇಕು ಎಂದು ಕೇಳಿದರು. ಇದೇನು ಅವರ ದುಡಿದು ಸಂಪಾದನೆ ಮಾಡಿರುವ ಆಸ್ತಿಯಾ? ಯಾರದೋ ದಲಿತರ ಭೂಮಿ. ಈ ರೀತಿಯ ಮಾತಿನಿಂದ 45 ವರ್ಷಗಳ ಸಿದ್ದರಾ ಮಯ್ಯ ರಾಜಕೀಯ ಜೀವನದ ಮೇಲ್ಪಂಕ್ತಿ ಉರುಳಿ ಹೋಯಿತು. ಸಿದ್ದರಾಮಯ್ಯ ಅವರು ಪ್ರಾಮಾಣಿಕರು ಎಂದುಕೊಂಡಿದ್ದವರಿಗ ಸತ್ಯ ಗೊತ್ತಾಯಿತು ಎಂದರು.