ಪಿ.ಬಿ.ರಸ್ತೆಯಲ್ಲಿ ಸ್ವಚ್ಛತೆ, ಪ್ರತಿಜ್ಞಾವಿಧಿ ಬೋಧನೆ
ದಾವಣಗೆರೆ ಸೆ.19 – ಅಕ್ಟೋಬರ್ 1 ರವರೆಗೆ ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು ಗುರುವಾರ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಮಹಾನಗರಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಚತೆಯೇ ಸೇವೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಪಾಲಿಕೆ ಮೇಯರ್ ವಿನಾಯಕ್ ಬಿ.ಹೆಚ್., ಜಿ.ಪಂ. ಸಿಇಒ ಸುರೇಶ್ ಬಿ.ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್ ಹಾಗೂ ಪಾಲಿಕೆ ಸದಸ್ಯರು ಭಾಗವಹಿಸುವ ಮೂಲಕ ಸ್ವಚ್ಛತೆ ಮಾಡಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ನಾನು ಸ್ವಚ್ಛತೆಗೆ ಬದ್ದನಾಗಿರುತ್ತೆನೆ ಮತ್ತು ಇದಕ್ಕಾಗಿ ಸಮಯವನ್ನು ವಿನಿಯೋಗಿಸುತ್ತೇನೆ. ಸ್ಥಳೀಯ ಸಂಸ್ಥೆಗಳ ಕಸ ಸಂಗ್ರಹ ವಾಹನಗಳಿಗೆ ಕಸವನ್ನು ಸಂಗ್ರಹಿಸಿ ನೀಡುತ್ತೇನೆ. ಯಾವುದೇ ರೀತಿಯ ಕಸವನ್ನು ಹೊರಗಡೆ ಎಲ್ಲಿಯೂ ಎಸೆಯುವುದಿಲ್ಲ ಎಂದು ಪ್ರತಿಜ್ಞಾ ವಿಧಿ ಭೋಧಿಸಲಾಯಿತು.
ನಂತರ ಎಲ್ಲಾ ಅಧಿಕಾರಿಗಳೊಂದಿಗೆ ಪಿ.ಬಿ.ರಸ್ತೆ ಸುತ್ತಮುತ್ತ ಪೊರಕೆಹಿಡಿಯುವ ಮೂಲಕ ಜೊತೆಗೂಡಿ ಕಸವನ್ನು ಗುಡಿಸಿ ನಗರವನ್ನು ಸ್ವಚ್ಚತೆ ಮಾಡುವಲ್ಲಿ ಕಾರ್ಮಿಕರಿಗೆ ಹಾಗೂ ಸಿಬ್ಬಂದಿಯವರಿಗೆ ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಲೋಕೇಶ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ನಾಗರಾಜ, ಪಾಲಿಕೆ ಆಯುಕ್ತರಾದ ರೇಣುಕಾ, ಸದಸ್ಯರಾದ ಕೆ.ನಾಗರಾಜ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.