ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ ಶ್ರಮಿಸಲು ಶಿಕ್ಷಕರಿಗೆ ಕರೆ

ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ ಶ್ರಮಿಸಲು ಶಿಕ್ಷಕರಿಗೆ ಕರೆ

ಹರಪನಹಳ್ಳಿಯಲ್ಲಿನ ವಿಜ್ಞಾನ ಶಿಕ್ಷಕರ ಕಾರ್ಯಾಗಾರದಲ್ಲಿ ಶಾಸಕರಾದ ಎಂ.ಪಿ. ಲತಾ

ಹರಪನಹಳ್ಳಿ, ಸೆ. 13 – ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಕುರಿತು ಜಾಗೃತಿ ನೀಡಿದ್ದಾರೆ. ಆದ್ದರಿಂದ ಉತ್ತಮ ಫಲಿ ತಾಂಶಕ್ಕೆ ಪ್ರತಿಯೊಬ್ಬ ಶಿಕ್ಷಕರು ಹೆಚ್ಚು ಶ್ರಮವಹಿಸಿಬೇಕು ಎಂದು ಶಾಸಕರಾದ ಲತಾ ಮಲ್ಲಿಕಾರ್ಜುನ ಹೇಳಿದರು. 

ಪಟ್ಟಣದ ಸಮತಾ ರೆಸಾರ್ಟ್‍ನಲ್ಲಿ ತಾಲ್ಲೂಕು ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ಕ್ಲಬ್ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೆಕ್ಕ, ಇಂಗ್ಲಿಷ್ ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿದೆ. ಅದನ್ನು ಸರಳೀಕರಿಸಿ ಮಕ್ಕಳಲ್ಲಿ ಕಲಿಕಾ ಜ್ಞಾನವನ್ನು ವೃದ್ಧಿಸಲು ಪ್ರಯತ್ನಿಸಿ. ಪ್ರತಿ ದಿನ ಒಂದು ಗಂಟೆ ಬೋಧನೆಯನ್ನು ಹೆಚ್ಚು ಮಾಡಿ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಿ ಎಂದು ರೆ ನೀಡಿದರು.

ವಿಜ್ಞಾನವನ್ನು ನಮ್ಮ ಪೂರ್ವಿಕರು ತಮ್ಮ ಹಬ್ಬ ಹರಿದಿನ ಗಳ ಆಚರಣೆಗಳಲ್ಲಿ ಅಳವಡಿಸಿಕೊಂಡಿದ್ದಾರೆ. ಸ್ಮಶಾನದಿಂದ ಆಗಮಿಸುವ ನಮಗೆ ಶುದ್ಧವಾದ ಸ್ನಾನ ಮಾಡುವಂತೆ, ಬಳೆ, ಮಾಂಗಲ್ಯಧಾರಣೆ, ರೀತಿ, ರಿವಾಜುಗಳಲ್ಲಿ ವಿಜ್ಞಾನವನ್ನು ಕಾಣಬಹುದು. ಓದಿನ ಜೊತೆ ಸಾಂಸ್ಕೃತಿಕ ಚಟುವಟಿಕೆ, ಸಂಸ್ಕೃತಿಯನ್ನು ಕಲಿಸಿದ್ದಾರೆ ಎಂದರು. 

ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಫಲಿತಾಂಶ ಸುಧಾರಣೆಗೆ ಶಿಕ್ಷಕರ ಪರಿಶ್ರಮ ಅತೀ ಹೆಚ್ಚಾಗಿರುವುದು ಅವಶ್ಯವಾಗಿದೆ. 

ಸಾಮಾನ್ಯ ಪ್ರಜೆಯನ್ನು ಉತ್ತಮ ನಾಗರೀಕರನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ರೈತ, ರಾಜಕಾರಣಿ, ಡಾಕ್ಟರ್, ಸಂಶೋಧಕರು, ಇಂಜಿನಿಯರ್‍ಗಳನ್ನು ಮಾಡುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವಹಿಸುತ್ತಾರೆ. ಸಮಾಜದಲ್ಲಿ ಬದಲಾವಣೆಗಳನ್ನು ಶಿಕ್ಷಕರು ಮಾಡಬಲ್ಲರು. ಟಿ.ವಿ. ಗಳಲ್ಲಿ ಮೂಡುವ ಭವಿಷ್ಯ ಶಾಸ್ತ್ರಕ್ಕೆ ಮಾರು ಹೋಗದೇ ವಿಜ್ಞಾನದ ಶಾಸ್ತ್ರಕ್ಕೆ ಮಹತ್ವ ನೀಡಿ ಜೀವನ ಸಾಗಿಸಿದರೆ ನೆಮ್ಮದಿಯನ್ನು ಕಾಣಬಹುದು ಎಂದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಲೇಪಾಕ್ಷಪ್ಪ ಮಾತನಾಡಿ, ಗುಣಾತ್ಮಕ ಶಿಕ್ಷಣದ ಕಾಳಜಿ ಅವಶ್ಯವಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಉತ್ತಮವಾಗಿಸಲು 20 ಪಾಂಯಿಂಟ್ ಪ್ರೋಗ್ರಾಂ ಅಳವಡಿಸಿಕೊಳ್ಳಲಾಗಿದೆ ಎಂದರು. 

ವಿಜಯನಗರ ಜಿಲ್ಲೆಯ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ರಾಜ್ಯ ಸಂಪನ್ಮೂಲ ಶಿಕ್ಷಕರಾದ ಶ್ರೀನಿವಾಸ, ಶಶಿಕುಮಾರ ಹಾಗೂ ಇತರರು ಒಂದು ದಿನದ ವಿಜ್ಞಾನ ಶಿಕ್ಷಕರ ಕಾರ್ಯಾಗಾರದಲ್ಲಿ ವಿವಿಧ ರೀತಿಯಲ್ಲಿ ಕಲಿಕಾ ಬೋಧನೆಗಳ ಮಜಲುಗಳನ್ನು ವಿವರಿಸಿದರು. 

ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕಾ ಅಧಿಕಾರಿ ಚಂದ್ರಶೇಖರ ವೈ.ಎಚ್. ಮಾತನಾಡಿದರು. 

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗರಾಜ, ಫ್ರೌಢಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಾಕ್ಷ ಎನ್.ಜಿ. ಮನೋಹರ, ತಾಲ್ಲೂಕು ವಿಜ್ಞಾನ ಕ್ಲಬ್ ಅಧ್ಯಕ್ಷ ಯತಿರಾಜ್, ಕೊಟ್ರೇಶ್, ಕೆ.ಎಂ. ಕೊಟ್ರಯ್ಯ, ಶಂಕರನಾಯ್ಕ್, ಬಸವಂತಪ್ಪ, ಜಯ ಮಾಲತೇಶ್, ಶಶಿಕಲಾ, ಕವಿತಾ ಹಾಗೂ ಇತರರು ಭಾಗವಹಿಸಿದ್ದರು. 

error: Content is protected !!